ನೀರಿಲ್ಲದೇ ಮೊಟ್ಟೆ ಬೇಯಿಸಿ

7

ನೀರಿಲ್ಲದೇ ಮೊಟ್ಟೆ ಬೇಯಿಸಿ

Published:
Updated:

ಲಂಡನ್ (ಪಿಟಿಐ):  ನೀರಿನ ಸಹಾಯವಿಲ್ಲದೇ ಮೊಟ್ಟೆಯನ್ನು ಬೇಯಿಸುವ ಸಾಮರ್ಥ್ಯ ಹೊಂದಿರುವ ರಟ್ಟಿನಿಂದ ಮಾಡಿದ ವಿಶಿಷ್ಟವಾದ ಪೆಟ್ಟಿಗೆಯನ್ನು ವಿಜ್ಞಾನಿಗಳು ರೂಪಿಸಿದ್ದಾರೆ.ಈ ರಟ್ಟಿನ ಪೆಟ್ಟಿಗೆಯು ರಾಸಾಯನಿಕ ಪದರವನ್ನು ಹೊಂದಿದ್ದು, ಇದು ಶಾಖವನ್ನು ಉತ್ಪಾದಿಸಿ ಒಳಗಿರುವ ಮೊಟ್ಟೆಯನ್ನು ಎರಡು ನಿಮಿಷಗಳಲ್ಲಿ ಬೇಯಿಸುತ್ತದೆ.ನೀರಲ್ಲಿ ಮೊಟ್ಟೆ ಬೇಯಲು ತೆಗೆದುಕೊಳ್ಳುವ ಅರ್ಧಕ್ಕಿಂತಲೂ ಕಡಿಮೆ ಸಮಯದಲ್ಲಿ ಈ ಪೆಟ್ಟಿಗೆಯು ಮೊಟ್ಟೆಯನ್ನು ಬೇಯಿಸುತ್ತದೆ. ರಷ್ಯಾದಲ್ಲಿ ದೊರಕುವ ಮೊಟ್ಟೆಯಿಂದ ಮಾಡುವ `ಗೊಗೊಲ್ ಮೊಗೊಲ್' ಎಂಬ ತಿನಿಸಿನ ಹೆಸರನ್ನು ಈ ಪೆಟ್ಟಿಗೆಗೆ ಇಡಲಾಗಿದೆ. `ಕೆಐಎಎನ್' ಎಂಬ ರಷ್ಯಾದ ತಜ್ಞರ ತಂಡ ವಿಶಿಷ್ಟ ಪೆಟ್ಟಿಗೆಯನ್ನು ರೂಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry