ಶುಕ್ರವಾರ, ನವೆಂಬರ್ 15, 2019
26 °C

ನೀರು, ಆಹಾರ ಮೊದಲು ಕೊಡಿ

Published:
Updated:

ಹಿಂದೆಂದೂ ಕಾಣದಷ್ಟು ತೀವ್ರ ಬರ ರಾಜ್ಯದಲ್ಲಿ ಎದುರಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆ ಹೆಚ್ಚಾಗಿದೆ. ಜನ ಬದುಕನ್ನು ಅರಸುತ್ತ ಹಳ್ಳಿಗಳನ್ನು ಬಿಟ್ಟು ಗುಳೆ ಹೊರಟಿದ್ದಾರೆ. ಇದನ್ನು ನೋಡಿ ಯಾದರೂ ಸರ್ಕಾರ ತಕ್ಷಣ ಪರಿಹಾರ ಕಾರ್ಯವನ್ನು ಕೈಗೊಳ್ಳಲಿ. ರಾಜ್ಯದ ಸಂಸದರು ಕೂಡಲೇ ಪ್ರಭಾವ ಬೀರಿ ಕೇಂದ್ರದ ನೆರವನ್ನು ಪಡೆಯಲಿ.ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಂದ ಪಡಿತರ ಚೀಟಿಯವರಿಗೆ ಅಕ್ಕಿ 1 ಕೆ.ಜಿ.ಗೆ ರೂ. 2ರ ಸೌಲಭ್ಯವನ್ನು ಚುನಾವಣಾ ಆಯೋಗ ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ರಾಜ್ಯ ಸರ್ಕಾರ ಕೂಡ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿ.

ಇದಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಬರುವುದಾದರೆ ಚುನಾವಣೆಯನ್ನು ಮುಂದೂಡಲಿ. ಜನರ ಬದುಕು ಬಹಳ ಮುಖ್ಯವಾದುದು, ಕೂಡಲೇ ಬರ ಪರಿಹಾರ ಕಾರ್ಯವನ್ನು ಕೈಗೊಳ್ಳಲಿ.

 

ಪ್ರತಿಕ್ರಿಯಿಸಿ (+)