ಸೋಮವಾರ, ಮೇ 17, 2021
23 °C

ನೀರು: ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಹಟ್ಟಿ ಗ್ರಾಮಕ್ಕೆ ನೀರು ಪೂರೈಸಲೆಂದು ಕಾಳೇಶ್ವರ ಕೆರೆಯ ಹತ್ತಿರ ಕೈಗೊಂಡಿರುವ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೂಪನಗೌಡ ಕರಡಲ್ ಪರಿಶೀಲಿಸಿದರು.ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಇನ್ನೊಂದು ವಾರದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಜೊತೆಯಲ್ಲಿದ್ದ ಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜಿ ಅವರಿಗೆ ಸೂಚಿಸಿದರು.

 

ಮಳೆಗಾಲದಲ್ಲಿ ಬಾವಿ ಮುಚ್ಚಿಹೋಗುವ ಸಾಧ್ಯತೆಗಳಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸುತ್ತ ಗೋಡೆ ನಿರ್ಮಿಸುಬೇಕೆಂದು ಸಲಹೆಯನ್ನು ನೀಡಿದರು.  ನೀರಿನ ಒತ್ತಡಕ್ಕೆ ಪೈಪ್‌ಗಳು ಒಡೆಯುತ್ತಿವೆ. ಅಲ್ಲಲ್ಲಿ ಏರ್ ವಾಲ್‌ಗಳು ಅಳವಡಿಸಬೇಕೆಂದು ಗ್ರಾಪಂ ಅಧ್ಯಕ್ಷರು ವಿವರಿಸಿದರು. ಇನ್ನೆರಡ್ಮೂರು ದಿನಗಳಲ್ಲಿ ವಾಲ್‌ಗಳು ಕೂಡಿಸುವ ಕಾರ್ಯಮುಗಿಸುವಂತೆ ಜಿಪಂ ಸದಸ್ಯ ಭೂಪನಗೌಡ ತಿಳಿಸಿದರು.ಅಸಮಾಧಾನ: ತಾಲ್ಲೂಕಿನಲ್ಲಿ ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡ ಬಹುತೇಕ ಕಾಮಗಾರಿಗಳು ಕಳಪೆ ಮತ್ತು ಅಪೂರ್ಣ ಸ್ಥಿತಿಯ್ಲ್ಲಲಿವೆ. ಈ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನೂ ಮುಂದೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಗುತ್ತಿಗೆ ನೀಡಬಾರದೆಂದು ಒತ್ತಡ ತರಬೇಕೆಂದು ಅಭಿಪ್ರಾಯ ಪಟ್ಟರು.ನೀರಿನ ಸಮಸ್ಯೆ: ಹಟ್ಟಿ ಗ್ರಾಪಂಗೆ ಒಳಪಡುವ ಹಟ್ಟಿ ಹೊಸೂರು ಗ್ರಾಮದಲ್ಲಿ ಬೋರ್‌ವೆಲ್‌ಗೆ ಪಂಪ್ ಕೂಡಿಸದ ಕಾರಣ ನೀರಿನ ತೊಂದರೆ ಉಂಟಾಗಿದೆ. ವಿದ್ಯುತ್ ತೊಂದರೆ ನೀಗಿಸಲು ಬೇರೆ ಲೈನ್ ಅಳವಡಿಸುವಂತೆ ಗ್ರಾಮಸ್ಥರು ತಮ್ಮ ಅಳಲನ್ನು ಜಿಪಂ ಸದಸ್ಯರ ಮುಂದಿಟ್ಟರು.

 

ತಕ್ಷಣ ಎಂಜಿನಿಯರ್‌ಗಳೊಂದಿಗೆ ಮಾತನಾಡಿ ಮೊಟಾರ್ ಅಳವಡಿಸಲು ಹಾಗೂ ನಿರಂತರ ಪೂರೈಕೆಗೆ ಬೇರೆ ವ್ಯವಸ್ಥೆಯನ್ನು ಮಾಡಿಸುವ ಭರವಸೆಯನ್ನು ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರಗೌಡ ಬಳಗಾನೂರ, ಬಾಬಾ ಬುಡನ್, ಆದಪ್ಪ, ಬಂದೆನವಾಜ್, ಶೌಕತ್, ಪಿಡಿಒ ಪ್ರಭುಲಿಂಗ್ ಪಾಟೀಲ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.