ಸೋಮವಾರ, ಮೇ 10, 2021
25 °C

ನೀರು ಕೇಳಿದವರ ಮೇಲಿನ ಹಲ್ಲೆಗೆ ಖಂಡನೆ:ವಿನಾಕಾರಣ ಲಾಠಿ ಪ್ರಹಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಕುಡಿಯುವ ನೀರಿಗಾಗಿ ಧರಣಿ ಕುಳಿತಿದ್ದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ತೊಂಡಾಲ ಗ್ರಾಮಸ್ಥರ ಮೇಲೆ ಪೊಲೀಸರು ವಿನಾ ಕಾರಣ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್ ಆಪಾದಿಸಿದ್ದಾರೆ.ಪಟ್ಟಣದ ಪಿಎಲ್‌ಡಿ ಕಚೇರಿ ಸಭಾಂಗಣದಲ್ಲಿ ಗುರು ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಲಾಠಿ ಪ್ರಹಾರ ನಡೆದಿಲ್ಲ. ಯಾರೂ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ 16 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು ಎಂದು ತಿಳಿಸಿದರು.ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದ ತೊಂಡಾಲ ಗ್ರಾಮಸ್ಥರು ಕಳೆದ 15 ರಂದು ಮಣಿಘಟ್ಟ ಕೆರೆಯಲ್ಲಿ ಕೊಳವೆ ಬಾವಿ ನಿರ್ಮಿಸುತ್ತಿದ್ದ ಕಡೆ ಹೋಗಿ ತಮ್ಮ ಹಳ್ಳಿಯಲ್ಲೂ ಕೊಳವೆ ಬಾವಿ ಕೊರೆಯುವಂತೆ ಮನವಿ ಮಾಡಿದರು. ಅದಕ್ಕೆ ಅವರು ಸ್ಪಂದಿಸದ ಪರಿಣಾಮವಾಗಿ ಧರಣಿ ಕುಳಿತಿದ್ದರು. ರಾಜಕೀಯ ಪ್ರೇರಣೆಯಿಂದ ಅವರನ್ನು ಚೆದುರಿಸಲಾಯಿತು ಎಂದು ಆಪಾದಿಸಿದರು.ರಾಜಕೀಯ ದುರುದ್ದೇಶ ಇಲ್ಲದಿದ್ದರೆ ಶಾಸಕರು ನಾಗರಿಕರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರ ಮೇಲೆ ಕ್ರಮಕ್ಕಾಗಿ ಒತ್ತಾಯಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗಭೂಷಣರೆಡ್ಡಿ, ಜಿಲ್ಲಾ ಮಾಜಿ ಸಂಘಟನಾ ಕಾರ್ಯದರ್ಶಿ ದಿಂಬಾಲ ವೆಂಕಟಾದ್ರಿ ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.