ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

7

ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಗಜೇಂದ್ರಗಡ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ನಗರದ ಹಿರೇ ಬಜಾರದ ನಿವಾಸಿಗಳು ಖಾಲಿಕೊಡ, ಪೊರಕೆಗಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಸ್ಥಳೀಯ ಆಡಳಿತ ಕಳೆದ ಮೂರು ವರ್ಷಗಳಿಂದ ಅಸಮರ್ಪಕ ನೀರು ಪೊರೈಸುತ್ತಿದೆ. ನಗರದ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಸಮರ್ಪಕ ನೀರು ಪೊರೈಸುತ್ತಿದೆ. ಆದರೆ, ಬಡ ಹಾಗೂ ಹಿಂದುಳಿದವರು ವಾಸಿಸುವ ಬಡಾವಣೆಗಳಿಗೆ ಮಾತ್ರ ಎಂಟು ದಿನಕ್ಕೊಮ್ಮೆ ಕೇವಲ ಒಂದು ಗಂಟೆ ನೀರು ಪೂರೈಕೆ ಮಾಡುತ್ತಿದೆ. ಪುರಸಭೆಯ ಅವೈಜ್ಞಾನಿಕ ನೀರು ಪೂರೈಕೆ ಕ್ರಮದಿಂದ ನಾಗರಿಕರು ಜಲ ದಾಹ ನೀಗಿಸಿಕೊಳ್ಳುವುದು ದುಸ್ತರ ವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಮೂರು ವರ್ಷಗಳಿಂದ ಸಮರ್ಪಕ ನೀರು ಪೂರೈಸುವಲ್ಲಿ ವಿಫ ಲ­ವಾದ ಪುರಸಭೆ ನೀರು ಕರ ಏರಿಕೆ ಮಾಡಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಪ್ರತಿ ಭಟನಾಕಾರರು, ಜಲಕ್ಷಾಮ ನಿವಾರಿ ಸುವ ನಿಟ್ಟಿನಲ್ಲಿ ಕನಿಷ್ಠ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸ್ಥಳೀಯ ಆಡಳಿತ ನೀರು ಸಂಗ್ರಹ ಕರ ಏರಿಕೆ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಪುರಸಭೆ ಸದಸ್ಯ ಅಶೋಕ ವನ್ನಾಲ, ಮುರಳಿ ಸವದಿ ಆಕ್ರೋಶ ವ್ಯಕ್ತಪಡಿಸಿದರು.ಸಮರ್ಪಕ ನೀರು ಪೊರೈಕೆಗೆ ಪೂರಕವಾದ ಕ್ರಮಗಳನ್ನು  ಕೈಗೊಂಡು ವಾರ ದೊಳಗಾಗಿ ಸಮಸ್ಯೆ ನಿವಾರಿಸ ದಿದ್ದರೆ ಪುರಸಭೆಗೆ ಬೀಗ ಜಡಿದು ಪ್ರತಿ ಭಟಿಸಲಾಗುವುದು. ನೀರು ಕರ ಸಂಗ್ರಹಕ್ಕೆ ಆಗಮಿಸುವ ಸಿಬ್ಬಂದಿ ಯನ್ನು್ನು ಕೂಡಿ ಹಾಕಿ ಪ್ರತಿಭಟಿಸಲಾ ಗುವುದು ಎಂದು ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದರು.ಮುತ್ತಯ್ಯ ಸಾಲಿಮಠ, ಮಹೇಶ ಡೊಳ್ಳಿನ, ಉಮೇಶ ನಾವಡೆ, ರುದ್ರಪ್ಪ ಮಡಿವಾಳರ, ಸರೋಜಮ್ಮ ಸಂಕನೂರ, ಬಸಮ್ಮ ಸಾಲಿಮಠ, ಶಾರದಾ ಅರಕೇರಿ, ಚೇತನ ಕರಣಿ, ಭರತ ಕರಣಿ ಸೇರಿದಂತೆ ನೂರಾರು ನಾಗರಿಕರು ಪ್ರತಿಭಟನೆಯಲ್ಲಿದ್ದರು.ನೇತ್ರ ತಪಾಸಣೆ   ಶಿಬಿರ ನಾಳೆ

ನರಗುಂದ: ಪಟ್ಟಣದ ಲಯನ್ಸ್‌ ಕ್ಲಬ್‌ ಹಾಗೂ ವಾಸನ್‌ ಕಣ್ಣಿನ ಆಸ್ಪತ್ರೆ  ಆಶ್ರಯದಲ್ಲಿ ತಾಲ್ಲೂಕಿನ ಚಿಕ್ಕನರ ಗುಂದದಲ್ಲಿ  ಇದೇ 14ರಂದು ಮಲ್ಲಮ್ಮ ಶಿವನಗೌಡ ಶೆಟ್ಟನಗೌಡ ಸ್ಮರಣಾರ್ಥ ಉಚಿತ ನೇತ್ರ ತಪಾಸಣೆ ನಡೆಯಲಿದೆ ಎಂದು ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ರವಿ ಮುಗಳಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry