ಮಂಗಳವಾರ, ಮೇ 18, 2021
24 °C

ನೀರು ಪೂರೈಕೆಗೆ ಒತ್ತಾಯಿಸಿ ನೀರೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಇಲ್ಲಿಯ 19ನೇ ವಾರ್ಡಿನಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು  ನಿವಾರಿಸುವಂತೆ ಆಗ್ರಹಿಸಿ ಮಹಿಳೆಯರು ಪುರಸಭೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ವಾರ್ಡಿನಲ್ಲಿ ಕೇವಲ ಎರಡು ಕಡೆ ಮಾತ್ರ ಸಾರ್ವಜನಿಕ ಕೊಳಾಯಿ ಇದ್ದು, ಈ ಕೊಳಾಯಿಗಳಲ್ಲಿ ನೀರು ಬರುವುದಿಲ್ಲ. ಕೆಲವರು ನೀರಿನ ಕೊಳವೆಗೆ ನೇರವಾಗಿ ಪಂಪ್‌ಸೆಟ್ (ಮೋಟರ್) ಅಳವಡಿಸಿಕೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕ ನಲ್ಲಿಗಳಿಗೆ ನೀರು ಪೂರೈಕೆ ಆಗುವುದಿಲ್ಲ ಎಂದು ಮಹಿಳೆಯರು ದೂರಿದರು.ಹಣ ಪಾವತಿಸಿ ಕೊಳಾಯಿ ಹಾಕಿಸಿಕೊಳ್ಳಲಾಗದವರು ಸಾರ್ವಜನಿಕ ಕೊಳಾಯಿ ಆವಲಂಬಿಸ್ದ್ದಿದಾರೆ. ಮೋಟರ್ ಅಳವಡಿಸಿಕೊಳ್ಳುವವರ ವಿರುದ್ಧ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಮಧ್ಯರಾತ್ರಿ 1 ಗಂಟೆ ಇಲ್ಲವೆ ನಸುಕಿನ 4ಗಂಟೆಗೆ ನೀರು ಸರಬಾರಾಜು ಮಾಡುತ್ತಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಎಲ್ಲರಿಗೂ ಅನುಕೂಲವಾಗುವಂತೆ ಮತ್ತು ನಿಗದಿತ ವೇಳೆಗೆ ನೀರು ಪೂರೈಸುವಂತೆ ಮಹಿಳೆಯರು ಮನವಿ ಮಾಡಿಕೊಂಡರು.`19ನೇ ವಾರ್ಡಿನ ಒಂದು ಭಾಗದಲ್ಲಿ ಸುಮಾರು 50 ಮನೆಗಳಿದ್ದು, ಎಲ್ಲರೂ ಕೃಷಿ ಕೂಲಿಕಾರರಿದ್ದಾರೆ. ಕುಡಿಯುವ ನೀರಿಗಾಗಿ ಸುತ್ತಮುತ್ತಲಿನ ಜನರಿಂದ ಬೇಡಿ ನಾಲ್ಕು ಕೊಡ ನೀರು ಪಡೆಯುತ್ತಿದ್ದೇವೆ. ನೀರಿನ ಸಮಸ್ಯೆಯನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಬಗೆಹರಿಸಬೇಕು~ ಎಂದು ಒತ್ತಾಯಿಸಿದರು.ಇದಲ್ಲದೇ ಪಂಪ್‌ಸೆಟ್‌ಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು, ಸಾರ್ವಜನಿಕ ಕೊಳಾಯಿಗಳ ಜೋಡಣೆ ಮಾಡಬೇಕು, ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಮನವಿ ಮಾಡಿಕೊಂಡರು.ಪುರಸಭೆ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಟಿ. ಲಿಂಗಾರೆಡ್ಡಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪುರಸಭೆ ಸದಸ್ಯೆ ಯು. ರೇಣುಕಮ್ಮ ಅವರೊಂದಿಗೆ ಚರ್ಚಿಸಿ, ನೀರಿನ ಪೂರೈಕೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.