ಗುರುವಾರ , ನವೆಂಬರ್ 21, 2019
23 °C

ನೀರು ಪೂರೈಕೆಗೆ ಸಮಯ ನಿಗದಿ ಮಾಡಿ

Published:
Updated:

ವಿದ್ಯಾಮಾನ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಗಣಿಸಿದ ಬಿಬಿಎಂಪಿ ನೀರು ಸರಬರಾಜು ಮಾಡಲು ಪ್ರಾರಂಭಿಸಿರುವುದು ಶ್ಲಾಘನೀಯ. ಆದರೆ ದಿನ ಮತ್ತು ವೇಳೆ ನಿಗದಿಪಡಿಸಿಲ್ಲ.ಕೆಲವೊಮ್ಮೆ ಮಧ್ಯಾಹ್ನ 1.30ಕ್ಕೆ ನೀರು ಬಿಡುತ್ತಾರೆ. ಈ ಹೊತ್ತು ಮನೆಗಳಲ್ಲಿ ಯಾರೂ ಇರುವುದಿಲ್ಲ. ಮಹಿಳೆಯರು, ಪುರುಷರು ಕೆಲಸಕ್ಕೆ ಹೋಗಿರುತ್ತಾರೆ. ಅದೃಷ್ಟವಶಾತ್ ಮನೆಯಲ್ಲೇ ಇರುವವರು (ಒಂದೆರಡು ಮನೆಯವರು) ಮಾತ್ರ ಒಂದು ಬೀದಿಯಲ್ಲಿ ನೀರು ಪಡೆಯಬಹುದಾಗಿದೆ. ಆದುದರಿಂದ ನೀರಿನ ಸರಬರಾಜಿಗೆ ಸಮಯ ಗೊತ್ತುಪಡಿಸುವುದು ಅಗತ್ಯ. ಜೊತೆಗೆ ಪ್ರತಿ ಭಾನುವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ನೀರು ಪೂರೈಸಿದಲ್ಲಿ ಎಲ್ಲಾ ಜನರಿಗೂ ಅನುಕೂಲವಾಗುತ್ತದೆ.

ಪ್ರತಿಕ್ರಿಯಿಸಿ (+)