ನೀರು ಸರಬರಾಜು ಮಂಡಳಿಯ ನೌಕರರ ಪ್ರತಿಭಟನೆ

7

ನೀರು ಸರಬರಾಜು ಮಂಡಳಿಯ ನೌಕರರ ಪ್ರತಿಭಟನೆ

Published:
Updated:

ಚನ್ನಪಟ್ಟಣ: ಗುತ್ತಿಗೆದಾರ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ನಗರ ನೀರು ಸರಬರಾಜು ಮಂಡಳಿಯ ಹಂಗಾಮಿ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಮಂಡಳಿಯ ಎಇಇ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.ಟೆಂಡರ್ ಮೂಲಕ ಆಯ್ಕೆಗೊಂಡು ಗುತ್ತಿಗೆದಾರ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ತಮಗೆ ಮೂರ‌್ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತ್ದ್ದಿದಾರೆ. ಈತ ನೋಂದಾಯಿತ ಗುತ್ತಿಗೆದಾರ ಇರಬಹುದೇ ಹೊರತು ಸೆಂಟ್ರಲ್ ಕಂಟ್ರ್ಯಾಕ್ಟ್ ಕಾಯಿದೆಯಡಿ ಪರವಾನಗಿ ಪಡೆದ ಗುತ್ತಿಗೆದಾರ ಆಗಿರುವುದಿಲ್ಲ, ನಾವು ಈತನ ನೌಕರರೂ ಅಲ್ಲ. ಈತ ನಮ್ಮ ಮೇಲೆ ವಿನಾಕಾರಣ ದಬ್ಬಾಳಕೆ ನಡೆಸುತ್ತಿದ್ದಾನೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ನ್ಯಾಯ ಕೊಡಿಸಬೇಕು ಎಂದು ನೌಕರರು ಒತ್ತಾಯಿಸಿದರು.ನೌಕರರು ಸಂಯಮದಿಂದ ವರ್ತಿಸಿದರೂ ಈತನ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನೌಕರರು ಎಚ್ಚರಿಸಿದರು.ನಮಗೆ ಈವರೆಗೂ ಕನಿಷ್ಠ ಕೂಲಿ ಕಾಯಿದೆಯಡಿ ಕೊಡುವ ವೇತನ, ಪಿಎಫ್, ಇಎಸ್‌ಇ ಸೌಲಭ್ಯಗಳನ್ನು ನೀಡಿರುವುದಿಲ್ಲ. ನಮ್ಮ ವೇತನದಲ್ಲಿ ಪಿಎಫ್ ಹಣ ಕಡಿತಗೊಳಿಸುತ್ತಿದ್ದರೂ ಅದನ್ನು ನಮ್ಮ ಹೆಸರಿನ ಪಿಎಫ್ ಅಕೌಂಟ್‌ಗೆ ಜಮಾ ಮಾಡುತ್ತಿಲ್ಲ. ಪ್ರತಿ ತಿಂಗಳೂ ಸಂಬಳವನ್ನೂ ಸರಿಯಾಗಿ ನೀಡುತ್ತಿಲ್ಲ. ರಜಾ ಸೌಲಭ್ಯಗಳಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ವರ್ಗಾವಣೆ, ವಜಾ ಮುಂತಾದ ಕ್ರಮ ಕೈಗೊಳ್ಳುತ್ತಾರೆ ಎಂದು ನೌಕರರು ಆರೋಪಿಸಿದರು.ಇದಕ್ಕೂ ಮೊದಲು ನೌಕರರು ಪಟ್ಟಣದ ಗಾಂಧಿ ಭವನದಿಂದ ಎಇಇ ಕಚೇರಿವರೆಗೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೌಕರರ ಧರಣಿಗೆ ಬೆಂಬಲ ಸೂಚಿಸಿತು.ನೌಕರರ ಸಂಘದ ಅಧ್ಯಕ್ಷ ವಿ.ಎನ್.ಹಳಕಟ್ಟಿ, ಕಾರ್ಯದರ್ಶಿ ಜಿ.ಎಂ. ಶಿವರಾಜು, ಉಪಾಧ್ಯಕ್ಷ ಎಸ್.ಟಿ.ರವಿ, ಖಜಾಂಚಿ ಕೃಷ್ಣ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಬೇವೂರು ಯೋಗೇಶ್, ಕೃಷ್ಣೇಗೌಡ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry