ನೀರ ದಾರಿ

7

ನೀರ ದಾರಿ

Published:
Updated:
ನೀರ ದಾರಿ

ತುಟಿ ಬಿರಿದು

ಸೂಸುವ ಮುಗುಳ್ನಗೆ

ಎತ್ತರೆತ್ತರ

ಇವನಾರವ ಇವನಾರವ ಎಂದವಗೆ

ಕಥೆಗಳೇ ಉತ್ತರ

ಸಗರ ಚಕ್ರವರ್ತಿಯೇನಲ್ಲ

ಕಥಾಸಾಗರನೆಂದರೆ ತಪ್ಪೇನಿಲ್ಲ

ದುರಾಡಳಿತಕ್ಕೆ ನೀರಸ್ಫೋಟ

ಕಥೆಗಳ ಜಲಬಾಂಬಿನಲಿ

ನೀರಗುಂಡು ನೀರಭರ್ಚಿ

ನೀರಲಾಠಿ ನೀರಮಚ್ಚು

ನೇರನೋಟ

ವ್ಯಾಖ್ಯಾನ ಬರೆದರು ಮುಳುಗಡೆಗೆ

ಕೊರಗಿದರು

ನೀರು ನುಂಗಿದ ಸಂಸ್ಕೃತಿಗೆ

ರೈಲು, ಪರಿಸರ, ನದಿ, ಜಲಪಾತ

ಹೋರಾಟ ಅವಿರತ ನಗುವು ಸಮ್ಮತ

ನವೋದಯ ಪ್ರಗತಿಶೀಲ

ನವ್ಯ ದಲಿತ ಬಂಡಾಯವೇನಲ್ಲ

ನೀರ ಮೇಲೆ ನಡೆದವರು

ನೀರಪಂಥ ಇವರದ್ದೇ ಇದೆಯಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry