ನೀಲಕಂಠೇಶ್ವರ ಕಳಸೋತ್ಸವ

7

ನೀಲಕಂಠೇಶ್ವರ ಕಳಸೋತ್ಸವ

Published:
Updated:

ತಾಳಿಕೋಟೆ: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಕುಲದೇವರಾದ ನೀಲಕಂಠೇಶ್ವರ ದೇವಾಲಯದ ಕಳಸೋತ್ಸವ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಸಡಗರ ಸಂಭ್ರಮಗಳಿಂದ ಆಚರಣೆ ಮಾಡಲಾಯಿತು.ಬೆಳಿಗ್ಗೆ ನೀಲಕಂಠೇಶ್ವರ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ವಿಧಿವಿಧಾನವಾಗಿ ಭಕ್ತಿಪೂರ್ವಕವಾಗಿ ಜರುಗಿದವು. ಬೆ.10ಕ್ಕೆ ಸಮಾಜದ ಸುಮಂಗಲೆಯರನ್ನು ಒಳಗೊಂಡು ಗಂಗಾಸ್ಥಳ, ಹಾಗೂ ಕಳಸದ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮಧ್ಯಾಹ್ನದ ಅವಧಿಯಲ್ಲಿ ಭಕ್ತಾದಿಗಳಿಗೆ ಮಹಾ ಪ್ರಸಾದ ಏರ್ಪಡಿಸಲಾಗಿತ್ತು. ಸಾಯಂಕಾಲ ಸಹಸ್ರ ದೀಪೋತ್ಸವ ಹಾಗೂ ಧಾರ್ಮಿಕ ಸಭೆ ನಡೆಸಲಾಯಿತು. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಸಿ.ಆರ್.ಕಲಬುರ್ಗಿ, ಉಪಾಧ್ಯಕ್ಷ ಶಂಭೂ ಹಂದಿಗನೂರ, ಹಿರಿಯರಾದ ಜಿ.ಜಿ.ಕಾದಳ್ಳಿ, ಕಾಶಿರಾಯ ಮಣೂರ, ನಿಂಗಪ್ಪ ಹೊಟ್ಟಿ, ಡಿ.ಎಲ್.ತಳಗಡೆ, ಸುಭಾಸ ಬಿಳೇಭಾವಿ, ಕಾಶಿನಾಥ ಕೋಳಕೂರ, ಸುಭಾಷ ಅಲ್ಲಾಪುರ, ಬಸನಗೌಡ ಹೊಟ್ಟಿ, ಲಿಂಗಪ್ಪ ಅಲ್ಲಾಪುರ, ರಮೇಶ ರಂಜಣಗಿ, ಕಾಶಿನಾಥ ಶಹಾಪುರ, ಸಂಗಪ್ಪ ಹಿಪ್ಪರಗಿ, ರಾಜು ಅಲ್ಲಾಪುರ, ಸಂಗಪ್ಪ ಮಸ್ಕಾನಾಳ, ಶಿವಶಂಕರ ಹಿಪ್ಪರಗಿ ಪಾಲ್ಗೊಂಡಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry