ನೀವೂ ಬನ್ನಿ ಎಂದ ತಹ್ಮಿನಾ!

ಬುಧವಾರ, ಮೇ 22, 2019
24 °C

ನೀವೂ ಬನ್ನಿ ಎಂದ ತಹ್ಮಿನಾ!

Published:
Updated:

ಲಂಡನ್ (ಎಎಫ್‌ಪಿ): ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡ ಆಫ್ಘಾನಿಸ್ತಾನದ ಏಕಮಾತ್ರ ಮಹಿಳಾ ಅಥ್ಲೀಟ್ ತಹ್ಮಿನಾ ಕೊಹಿಸ್ತಾನಿ ಅವರು ತಮ್ಮ ದೇಶದ ಇತರ ಮಹಿಳೆಯರಿಗೆ `ನೀವು ಬನ್ನಿ ನನ್ನೊಂದಿಗೆ ಸೇರಿಕೊಳ್ಳಿ~ ಎಂದು ಸಂದೇಶ ನೀಡಿದ್ದಾರೆ.100 ಮೀ. ಓಟದ ಸ್ಪರ್ಧೆಯ ಹರ್ಡಲ್ಸ್‌ನಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ (14.42 ಸೆ.) ನೀಡಿದ ಅವರು ತಮ್ಮ ದೇಶದ ಇನ್ನಷ್ಟು ಮಹಿಳಾ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂದು ಆಶಿಸಿದ್ದಾರೆ.

ಮದ್ದು ಪರೀಕ್ಷೆ: ಐವಾನ್‌ಗೆ ಸ್ಪರ್ಧಿಸುವ ಅವಕಾಶವಿಲ್ಲಲಂಡನ್ (ಎಪಿ): 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪಡೆದಿದ್ದ ಸ್ಯಾಂಪಲ್‌ಗಳ ಮರುಪರೀಕ್ಷೆಯಲ್ಲಿ ಬೆಲಾರಸ್‌ನ ಹ್ಯಾಮರ್ ಥ್ರೋ ಸ್ಪರ್ಧಿ ಐವಾನ್ ತ್ಸಿಖಾನ್ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ, ಆದ್ದರಿಂದ ಲಂಡನ್ ಕೂಟದಲ್ಲಿ ಅವರಿಗೆ ಸ್ಪರ್ಧಿಸುವ ಅವಕಾಶವಿಲ್ಲ.ಕ್ಸಿಯಾಂಗ್‌ಗೆ ಗಾಯ

ಲಂಡನ್ (ಐಎಎನ್‌ಎಸ್):
ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಚೀನಾದ ಲಿಯು ಕ್ಸಿಯಾಂಗ್ ಅವರು ಗಾಯಗೊಂಡಿದ್ದಾರೆ. `ಪಾದದ ನೋವಿನಿಂದ ಕ್ಸಿಯಾಂಗ್ ಬಳಲಿದ್ದಾರೆ. ಆದ್ದರಿಂದ ನಾವೀಗ ಸ್ವಲ್ಪ ಆತಂಕಗೊಂಡಿದ್ದೇವೆ~ ಎಂದು ಕೋಚ್ ಸುನ್ ಹೈಪಿಂಗ್ ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry