ನೀ.. ಇಲ್ಲದೇ ಗಾನ ಬಜಾನಾ

7

ನೀ.. ಇಲ್ಲದೇ ಗಾನ ಬಜಾನಾ

Published:
Updated:

ಚೆನ್ನುಪಾಟಿ ನಾಗಮಲ್ಲೇಶ್ವರಿ ನಿರ್ಮಿಸುತ್ತಿರುವ ಶಿವಗಣಪತಿ ನಿರ್ದೇಶನದ ‘ನೀ.. ಇಲ್ಲದೇ’ ಚಿತ್ರದ ಸೀಡಿ ಬಿಡುಗಡೆ ಅಂದು.

ಕಳೆದ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶ್ರಿ ವೀಣಾ ಎಜುಕೇಷನ್ ಸೊಸೈಟಿಯ 80 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ ಅಂದೇ.ಮೈಸೂರು, ಬೆಂಗಳೂರು ಸುತ್ತಮುತ್ತ ‘ನೀ.. ಇಲ್ಲದೇ’ಗೆ ಚಿತ್ರೀಕರಣ ಮಾಡಲಾಗಿದೆ. ಡಬಿಂಗ್ ಹಾಗೂ ರಿರೆಕಾರ್ಡಿಂಗ್ ಕೂಡ ಮುಗಿದಿದೆ.

ಹಳ್ಳಿ ಹುಡುಗಿಯಾಗಿ ಪೂಜಾಗಾಂಧಿ ಅವರಿಗೆ ಸಂಗೀತ ಕಲಿಸುವ ಮೇಷ್ಟ್ರಾಗಿ ರಘು ಮುಖರ್ಜಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಂದು ಮಕ್ಕಳು ನರ್ತಿಸಿದರು. ಪೂಜಾಗಾಂಧಿ, ರಘು ಮುಖರ್ಜಿ, ಅನಂತವೇಲು, ಜಯಲಕ್ಷ್ಮಿ, ಬುಲೆಟ್ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸುರೇಂದ್ರ ರೆಡ್ಡಿ ಛಾಯಾಗ್ರಹಣ, ಆಸ್ಲೇ ಅಭಿಲಾಶ್ ಸಂಗೀತ, ಕೆಂಪರಾಜ್ ಸಂಕಲನ, ಗಜೇಂದ್ರ ಕುಮಾರ್ ಸಂಭಾಷಣೆ ಒದಗಿಸಿದ್ದಾರೆ.ಸಮಾರಂಭದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಶ್ರಿನಿವಾಸ್, ಬಿ.ಬಿ.ಎಂ.ಪಿ ಸದಸ್ಯ ತಿಮ್ಮರಾಜು, ಲಕ್ಷ್ಮಿದೇವಿ ನಗರದ ಆನಂದಪ್ಪ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ತಿಮ್ಮನಂಜಯ್ಯ, ಶ್ರಿವೀಣಾ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಗಿರಿಜೇಶ್ವರಿ ದೇವಿ, ನಿರ್ಮಾಪಕಿ ನಾಗಮಲ್ಲೇಶ್ವರಿ, ಲಹರಿ ಸಂಸ್ಥೆಯ ವೇಲು, ಕರಿಸುಬ್ಬು, ಕೆ.ವಿ. ನಾಗೇಶ್ ಕುಮಾರ್, ಸೈಕೋ ಚಿತ್ರದ ನಿರ್ದೇಶಕ ದೇವದತ್ತ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry