ಸೋಮವಾರ, ಆಗಸ್ಟ್ 26, 2019
27 °C

ನುಗು ಮತ್ತು ತಾರಕ ಜಲಾಶಯಗಳು ಭರ್ತಿ

Published:
Updated:

ಎಚ್.ಡಿ. ಕೋಟೆ: ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ನುಗು ಮತ್ತು ತಾರಕ ಜಲಾಶಯಗಳೂ ಸೇರಿವೆ. ಈ ಎರಡೂ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದು ಶುಕ್ರವಾರದಿಂದ 2ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ.ನುಗು: ನುಗು ಜಲಾಶಯ 2009ರಲ್ಲಿ ಭರ್ತಿಯಾಗಿದ್ದನ್ನು ಹೊರತುಪಡಿಸಿದರೆ ಇದುವರೆಗೆ ಭರ್ತಿಯಾಗಿರಲಿಲ್ಲ. ತಾಲ್ಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಗರಿಷ್ಠ ಮಟ್ಟ 110 ಅಡಿ ತಲುಪಿರುವ ಹಿನ್ನೆಲೆಯಲ್ಲಿ ಎರಡೂ ಕ್ರಸ್ಟ್ ಗೇಟ್‌ಗಳ ಮೂಲಕ ನದಿ ಹರಿವಿಗೆ 2ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.ತಾರಕ: 1984ರಲ್ಲಿ ನಿರ್ಮಾಣವಾದ ತಾರಕ ಜಲಾಶಯ ನಿರ್ಮಾಣವಾದಾಗಿನಿಂದಲೂ ಇಷ್ಟು ನೀರು ಸಂಗ್ರಹವಾಗಿರಲಿಲ್ಲ ಎಂದು ತಾರಕ ನಾಲೆಯ ಎಇಇ ಅಚ್ಯುತ್ ತಿಳಿಸಿದರು.ಈ ಜಲಾಶಯದ ಗರಿಷ್ಠ ಮಟ್ಟ 2425ಅಡಿಯಾಗಿದ್ದು, ಇದೀಗ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ 2ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಜಲಾಶಯದಲ್ಲಿ 3.80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ.ಪ್ರತಿ ವರ್ಷವೂ ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ ಯಂತ್ರಗಳ ಮೂಲಕ ನೀರನ್ನು ಹರಿಸಲಾಗುತ್ತಿತ್ತು. ಈ ವರ್ಷವೂ ಸಹ ನೀರನ್ನು ಕಬಿನಿಯಿಂದ ಯಂತ್ರಗಳ ಮೂಲಕ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 1ತಿಂಗಳಿನಿಂದ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು.ಕಳೆದ 2006 ರಲ್ಲಿ ಈ ಜಲಾಶಯ ಒಂದು ಕ್ರೆಸ್ಟ್‌ಗೇಟ್ ಒಡೆದು ಅಕ್ಕ ಪಕ್ಕದ ಜಮೀನು ಮತ್ತು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿತ್ತು. ಆಗ ಈ ಭಾಗದ ರೈತರಿಗೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ರೂ 50ಲಕ್ಷಕ್ಕೂ ಹೆಚ್ಚು ಪರಿಹಾರ ನೀಡಿದ್ದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನಾಗರಹೊಳೆ ಮತ್ತು ಸಾರತಿ ನದಿ ಮೂಲಕ ಹೆಚ್ಚಾಗಿ ನೀರು ಹರಿದು ಬರುತ್ತಿದ್ದು ತಾರಕ ಜಲಾಶಯ ಭರ್ತಿಯಾಗಲು ಕಾರಣವಾಗಿದೆ.

Post Comments (+)