`ನುಡಿದಂತೆ ನಡೆದ ಅನುಭಾವಿ ಗುರುಸಿದ್ದರಾಮೇಶ್ವರ'

ಬುಧವಾರ, ಜೂಲೈ 24, 2019
24 °C

`ನುಡಿದಂತೆ ನಡೆದ ಅನುಭಾವಿ ಗುರುಸಿದ್ದರಾಮೇಶ್ವರ'

Published:
Updated:

ಕಡೂರು:  ಸಮಾಜಕ್ಕೆ ಉಪದೇಶ ಮಾಡುವುದು ಸುಲಭ, ಆದರೆ ನುಡಿದಂತೆ ನಡೆಯುವುದು ಕಷ್ಟ. ಶತಮಾನಗಳ ಹಿಂದೆಯೇ ನಡೆ ಮತ್ತು ನುಡಿಗೆ ಅನುಗುಣವಾಗಿ ನಡೆದ ಅನುಭಾವಿ ಗುರುಸಿದ್ದರಾಮೇಶ್ವರ ಅವರು ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.ಕಡೂರು ಪಟ್ಟಣದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಗುರು ಸಿದ್ದರಾಮೇಶ್ವರರ 841ನೇ ಜಯಂತಿಯ ಪೂರ್ವಭಾವಿ ಸಭೆಯನ್ನು ಕೆ.ಹೊಸಳ್ಳಿಯ ಗಂಗಾಂಬಿಕಾ ಸಮುದಾಯಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಸಮಾನತೆ ಮತ್ತು ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸಿದ ಮಹಾನುಭಾವ ಸಿದ್ದರಾಮೇಶ್ವರ ಅವರ ಜಯಂತಿ ಆಚರಣೆ ಕಡೂರಿಗೆ ಒಲಿದು ಬಂದು ನಮ್ಮ ಪುಣ್ಯದ ಪಾಲನ್ನು ಹೆಚ್ಚಿಸಿದೆ. ಜಯಂತ್ಯುತ್ಸವದಲ್ಲಿ ತನು-ಮನ-ಧನದೊಂದಿಗೆ ಸೇವೆ ಸಲ್ಲಿಸುವುದಾಗಿ ತಿಳಿಸಿದರು.ಶಾಸಕ ಸಿ.ಟಿ.ರವಿ ಮಾತನಾಡಿ, ಕಡೂರಿನಲ್ಲಿ ಕಳೆದ ವರ್ಷ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ವೈಭವ ಇನ್ನೂ ನೆನಪಿನಿಂದ ಮಾಸಿಲ್ಲ. ಅಂತಹ ವೈಭವ ಮರುಕಳಿಸುವ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ತಮ್ಮ ಸಂಪೂರ್ಣ ಸಹಕಾರವಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ನಮ್ಮ ವೈಯಕ್ತಿಕ ಅನುಭವವನ್ನು ಮತ್ತು ಧಾರ್ಮಿಕ ತಳಹದಿಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.ನೊಳಂಬ ಸಮಾಜದ ಕೇಂದ್ರಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ತಾಲ್ಲೂಕು ಸಮಿತಿಯ ಆಗ್ರಹದ ಮೇರೆಗೆ ಜಯಂತಿ ಆಚರಣೆಗೆ ಅನುಮತಿ ದೊರೆತಿದೆ. ಉತ್ಸವ ಸಮಿತಿ ಅಧ್ಯಕ್ಷರಾಗಿ ಗುರುಪ್ರಸಾದ್, ಕಾರ್ಯಾಧ್ಯಕ್ಷರಾಗಿ ಕಾಮನಕೆರೆ ಶಶಿಧರ್ ಮತ್ತು ಕಾರ್ಯದರ್ಶಿಯಾಗಿ ಬಸವರಾಜಪ್ಪ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿದರು.ಜಿ.ಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಹಿಂದಿನ ಉತ್ಸವಗಳು ನಡೆದ ಸ್ಥಳಗಳ ಮಾರ್ಗದರ್ಶನ ಪಡೆದು ಇಲ್ಲಿನ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಡೆಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರ ಹೇಳಿದರು.ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಚಟ್ನಳ್ಳಿ ಮಹೇಶ್, ಪಿ.ಕೆ.ರೇವಣ್ಣಯ್ಯ, ಸಿ.ಎನ್.ಶೇಖರಪ್ಪ, ಕೆ.ಎಂ.ವಿನಾಯಕ, ಜಿ.ಪಂ.ಸದಸ್ಯ ಬಿ.ಪಿ.ನಾಗರಾಜ್ ಮುಂತಾದವರು ಮಾತನಾಡಿದರು.ಯಳನಾಡು, ಹುಲಿಕೆರೆ, ಕೆ.ಬಿದರೆ ಮತ್ತು ಬೀರೂರು ರಂಭಾಪುರಿ ಪೀಠದ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ವೀರಶೈವ ಸಮಾಜದ ಎಚ್.ಎಂ.ಲೋಕೇಶ್, ಬಿಸಿಲೆರೆ ದೇವರಾಜ್, ತರೀಕೆರೆ ಮಾಜಿ ಶಾಸಕ ಎಸ್.ಎಂ.ನಾಗರಾಜ್, ಜಿ.ಪಂ ಸದಸ್ಯ ಕಲ್ಮರುಡಪ್ಪ, ತಾ.ಪಂ. ಸದಸ್ಯೆ ಎ.ಇ.ರತ್ನ, ಉಮಾಪತಿ, ನಾಗರಾಜ್, ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry