ಮಂಗಳವಾರ, ಮೇ 11, 2021
19 °C

ನುಡಿ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಡಗುಂದಿ:  ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಲ್ಲಿ ವೈವಿಧ್ಯಮಯ, ಮನೋರಂಜಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ವಿಷಯ ಕುರಿತ ಪುಸ್ತಕಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿತ್ತು.ಮಕ್ಕಳ ಸಾಹಿತ್ಯ ಪುಸ್ತಕದಿಂದ ಹಿಡಿದು ತತ್ವಶಾಸ್ತ್ರದ ಪುಸ್ತಕಗಳು ಇಲ್ಲಿ ಲಭ್ಯವಿದ್ದವು.ಖಾದಿ ಬಟ್ಟೆಗಳ ಭಾರಿ ವ್ಯಾಪಾರ: ಸಾಹಿತ್ಯ ಸಮ್ಮೇಳನದಲ್ಲಿ ಕೈಮಗ್ಗ ಸಹಕಾರಿ ಮಾರಾಟ ಸಂಸ್ಥೆಯವರ ಖಾದಿ ಬಟ್ಟೆಯ ಜಾಕೆಟ್ ಎಲ್ಲರ ಆಕರ್ಷಣೀಯ ವಸ್ತುವಾಯಿತು.ಸಮ್ಮೇಳನಕ್ಕೆ ಆಗಮಿಸಿದ ಬಹುತೇಕ ಕನ್ನಡಾಭಿಮಾನಿಗಳು ಖಾದಿ ಬಟ್ಟೆಯ ಜಾಕೆಟ್ ಕೊಳ್ಳುವುದರಲ್ಲಿಯೇ ಮಗ್ನ ರಾಗಿದ್ದರು. ಸುಮಾರು 300 ಕ್ಕೂ ಅಧಿಕ ಶಿಕ್ಷಕರು, ಸಾಹಿತಿ ಗಳು ಜಾಕೆಟ್‌ನ್ನೆ ಖರಿದಿಸಿ, ಧರಿಸಿ, ಖಾದಿಧಾರಿಗಳಾಗಿ ಸಂಭ್ರಮಿಸಿದ್ದು ಹೆಚ್ಚಾಗಿತ್ತು. ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿಯೂ ಪುಸ್ತಕಗಳ ಮಾರಾಟ ಜೋರಾಗಿದ್ದು ಜನತೆಯಲ್ಲಿ ಕನ್ನಡ ಪುಸ್ತಕಗಳ ಓದುವಿಕೆ ಹೆಚ್ಚಾಗಿದೆ ಎನ್ನುತ್ತಾರೆ ಪುಸ್ತಕ ಖರಿದಿಸಿದ ಬಸವನಬಾಗೇವಾಡಿಯ ಲಲಿತಕುಮಾರ ಹಗರಗೊಂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.