ನುಸುಳುಕೋರರಿಂದ ದೇಶ ವಿಭಜಿಸಲು ಯತ್ನ
ಮೈಸೂರು: ಅಸ್ಸಾಂ ಹಿಂಸಾಚಾರ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಮೂಲಕ ದೇಶ ವಿಭಜಿಸಲು ಷಡ್ಯಂತರ ನಡೆಯುತ್ತಿದೆ~ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದರೆ ಇಲ್ಲಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, `ಅಸ್ಸಾಂನ ಬೊಡೊ ಕ್ಷೇತ್ರ ಮತ್ತು ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಉಂಟಾಗಿರುವ ದಂಗೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರ ಪೂರ್ವನಿಯೋಜಿತ ಹಾಗೂ ರಾಜಕೀಯ ಪ್ರೇರಿತ ಷಡ್ಯಂತರವೇ ಕಾರಣ.
ಬಾಂಗ್ಲಾ ದೇಶಿ ನುಸುಳುಕೋರರು ಸ್ಥಳೀಯ ಜನರ ಭೂಮಿಯನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿರುವುದು ಅಸ್ಸಾಂ ಹಿಂಸಾಚಾರಕ್ಕೆ ಪ್ರಮುಖ ಕಾರಣ~ ಎಂದು ತಿಳಿಸಿದರು.
`ಆಲ್ ಅಸ್ಸಾಂ ಮೈನಾರಿಟಿ ಸ್ಟುಡೆಂಟ್ ಮತ್ತು ಆಲ್ ಬಿಟಿಎಡಿ ಮೈನಾರಿಟಿ ಸ್ಟುಡೆಂಟ್ (ಎಬಿಎಂಎಸ್ಯು) ಯೂನಿಯನ್ ಕಾರ್ಯಕರ್ತರ ಮೇಲೆ ನಡೆಸಿದ ಗೋಲಿಬಾರ್ನಲ್ಲಿ ಯಾವುದೇ ದಾಳಿಕೋರರ ಗುರುತು ಪತ್ತೆಯಾಗಿಲ್ಲ.
ಇದಕ್ಕಿಂತ ಮುಂಚಿತ ವಾಗಿಯೇ ಬಿಟಿಎಡಿ ಸ್ಥಾನೀಯ ಅಸ್ಸೋಂ ಸಮಾಜವನ್ನು ಬೊಡೊ ಮತ್ತು ಬೊಡೊಯೇತರ ಎಂದು ವಿಭಜಿಸುವ ಷಡ್ಯಂತರ ನಡೆಸಲಾಗಿತ್ತು. ಇದಕ್ಕೆ ಆಲ್ ಇಂಡಿಯ ಡೆಮಕ್ರೆಟಿಕ್ ಫ್ರಂಟ್ (ಎಐಡಿಯುಎಫ್) ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಬೆಂಬಲ ನೀಡುತ್ತಿದ್ದಾರೆ~ ಎಂದು ಆರೋಪಿಸಿದರು.
`ಆಕ್ರಮಣಕಾರರ ದಾಳಿಗೆ ಒಳಗಾಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರು ತಮ್ಮ ಮನೆಗಳಿಗೆ ಹೇಗೆ ವಾಪಸ್ಸಾಗುವುದು ಎಂಬ ಆತಂಕವನ್ನು ಅಧ್ಯಯನಕ್ಕೆ ತೆರಳಿದ್ದ ಎಬಿವಿಪಿ ತಂಡದ ಮುಂದೆ ವ್ಯಕ್ತಪಡಿಸಿದ್ದಾರೆ.
ನುಸುಳು ಕೋರರ ಹಿಂಸಾಚಾರವನ್ನು ಜಾತಿ ಕಲಹ ವೆಂದು ಬಿಂಬಿಸುವ ಪ್ರಯತ್ನ ಮಾಡ ಲಾಗುತ್ತಿದೆ. ಎಬಿವಿಪಿ ಅಧ್ಯಯನ ತಂಡದ ಅನುಭವ, ವರದಿಯನ್ನು ತಯಾ ರಿಸಿ ದೇಶದಲ್ಲಿ ಜನಜಾಗರಣ ಅಭಿಯಾನ ಪ್ರಾರಂಭಿಸಲಿದೆ~ ಎಂದು ತಿಳಿಸಿದರು. ಎಬಿವಿಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ನರೇಶ್, ನಗರ ಸಂಚಾಲಕ ರಾಕೇಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.