ನೂತನ ಕೊಠಡಿಗಳ ಉದ್ಘಾಟನೆ

7

ನೂತನ ಕೊಠಡಿಗಳ ಉದ್ಘಾಟನೆ

Published:
Updated:

ಯಲಹಂಕ: ಅಟ್ಟೂರು, ಅಟ್ಟೂರು ಬಡಾವಣೆ ಹಾಗೂ ಅನಂತಪುರ ಗ್ರಾಮದಲ್ಲಿ ಬಿಡಿಎ ವತಿಯಿಂದ ನಿರ್ಮಿಸಿರುವ ಸರ್ಕಾರಿ ಶಾಲೆಗಳ ನೂತನ ಕೊಠಡಿಗಳನ್ನು ಶಾಸಕ ಎಸ್.ಆರ್. ವಿಶ್ವನಾಥ್ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಅಟ್ಟೂರು ಮತ್ತು ಅಟ್ಟೂರು ಬಡಾವಣೆಯಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಅಲ್ಲದೆ ವಾರ್ಡ್ ಸಂಖ್ಯೆ-3ರ ವ್ಯಾಪ್ತಿಯ ನಾಗರಿಕರಿಗೆ ನೀರಿನ ಟ್ಯಾಂಕರ್ ಮೂಲಕ ಉಚಿತವಾಗಿ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಯರಂಗ, ಬಿಜೆಪಿ ಮುಖಂಡರಾದ ಡಾ.ಶಶಿಕುಮಾರ್, ಡಿ.ಕಾಳಪ್ಪ, ಶ್ರೀನಿವಾಸಾಚಾರಿ, ರಮೇಶ್, ಪವನ್, ಬಿಡಿಎ ಸಹಾಯಕ ಎಂಜಿನಿಯರ್ ಮನಮೋಹನ್, ಬಿಬಿಎಂಪಿ ಸಹಾಯಕ ಎಂಜಿನಿಯರ್ ಯದುಕೃಷ್ಣ ಮೊದಲಾದವರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry