ನೂತನ ಟೆಲಿಮೆಡಿಸಿನ್ ವ್ಯವಸ್ಥೆ

7

ನೂತನ ಟೆಲಿಮೆಡಿಸಿನ್ ವ್ಯವಸ್ಥೆ

Published:
Updated:

ಬೆಂಗಳೂರು: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ನಗರದ ರೆಫೆರಲ್ ಆಸ್ಪತ್ರೆಗಳು ಸೇರಿದಂತೆ ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲಿ ನೂತನ ಟೆಲಿಮೆಡಿಸಿನ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.`ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವಕಿ ಉಮೇಶ್, `ನಗರದ 17 ಆರೋಗ್ಯ ಕೇಂದ್ರಗಳಲ್ಲಿ ಈ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಈ ಕೇಂದ್ರಗಳಗೆ ಕಿಯೋನಿಕ್ಸ್ ಸಂಸ್ಥೆಯು ತಾಂತ್ರಿಕ ನೆರವು ಒದಗಿಸಲಿದೆ~ ಎಂದರು.`ಬನಶಂಕರಿಯ ರೆಫೆರಲ್ ಆಸ್ಪತ್ರೆಯಲ್ಲಿ ಈಗಾಗಲೇ ಈ ವ್ಯವಸ್ಥೆಯಿದ್ದು, ಸಿದ್ದಯ್ಯ ರಸ್ತೆಯ ದಾಸಪ್ಪ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು~ ಎಂದರು.`ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳ ಸಹಯೋಗದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು.

 

ಆರೋಗ್ಯ ಕೇಂದ್ರಗಳಿಗೆ ಇಸಿಜಿ ಮತ್ತಿತರ ಅತ್ಯಾಧುನಿಕ ರೋಗ ಪತ್ತೆ ಯಂತ್ರಗಳು, ಆರೋಗ್ಯ ಸಲಕರಣೆಗಳನ್ನು ನೀಡಲಾಗುವುದು~ ಎಂದರು.`ಯಾವುದೇ ರೋಗಿ ಎದೆ ನೋವು ಎಂದು ಆರೋಗ್ಯ ಕೇಂದ್ರಗಳಿಗೆ ಬಂದರೆ, ಅಲ್ಲಿಂದ ಜಯದೇವ ಆಸ್ಪತ್ರೆಯ ಜತೆಗೆ ಟೆಲಿಮೆಡಿಸಿನ್ ಸಹಾಯದಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದು ಚಿಕಿತ್ಸೆ ನೀಡಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ~ ಎಂದು ಮಾಹಿತಿ ನೀಡಿದರು.`ಮುಂದೆ ಇದನ್ನು  ಇನ್ನೂ ಹೆಚ್ಚು ಬಿಬಿಎಂಪಿ ಆಸ್ಪತ್ರೆಗಳಿಗೆ ವಿಸ್ತರಿಸುವ ಚಿಂತನೆ ಇದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry