ಬುಧವಾರ, ನವೆಂಬರ್ 13, 2019
28 °C

ನೂತನ ಡಿಸಿಪಿ ಆಗಿ ರಮೇಶ್ ಅಧಿಕಾರ ಸ್ವೀಕಾರ

Published:
Updated:

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಬಿ. ರಮೇಶ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.


ನವನಗರದಲ್ಲಿರುವ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀನಾಥ ಜೋಶಿ ಅವರು ರಮೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ಈ ಹಿಂದೆ ಡಿಸಿಪಿ ಆಗಿದ್ದ ಎಸ್.ಎಂ.ಪ್ರತಾಪನ್ ಅವರು ಮಾರ್ಚ್ 31ರಂದು  ನಿವೃತ್ತಿಯಾಗಿದ್ದು, ತೆರವು ಆದ ಸ್ಥಾನಕ್ಕೆ ರಮೇಶ್ ನಿಯುಕ್ತಿಗೊಂಡಿದ್ದಾರೆ. 2009ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ರಮೇಶ್, ಈ ಮೊದಲು ಚಿಂತಾಮಣಿಯಲ್ಲಿ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)