ನೂತನ ರಸ್ತೆಗೆ ಇಂದಿರಾ ಹೆಸರು

7

ನೂತನ ರಸ್ತೆಗೆ ಇಂದಿರಾ ಹೆಸರು

Published:
Updated:
ನೂತನ ರಸ್ತೆಗೆ ಇಂದಿರಾ ಹೆಸರು

ಯಲಹಂಕ: ರಾಮಚಂದ್ರಪುರ ವೃತ್ತದಿಂದ ಗಂಗಮ್ಮಗುಡಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಕುವೆಂಪುನಗರ ವಾರ್ಡ್ ವ್ಯಾಪ್ತಿಯ ವೇಲಾಂಗಣಿ ರಸ್ತೆ ಸಮೀಪದಲ್ಲಿ ನಿರ್ಮಿಸಿರುವ ನೂತನ ರಸ್ತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯವರ ಹೆಸರನ್ನು ನಾಮಕರಣ ಮಾಡಲಾಯಿತು.

ರಸ್ತೆಯನ್ನು ಉದ್ಘಾಟಿಸಿ ಮಾತ ನಾಡಿದ ಬಿಬಿಎಂಪಿ ಸದಸ್ಯೆ ಕೆ.ಆರ್. ಯಶೋಧಮ್ಮ ಅವರು, ಈ ಎರಡೂ ವೃತ್ತಗಳ ನಡುವೆ ಹಲ ವಾರು ಬಡಾವಣೆಗಳಿದ್ದು, ಈ ಹಿಂದೆ ಇಲ್ಲಿನ ನಿವಾಸಿಗಳು ಒಂದು ವೃತ್ತದಿಂದ ಇನ್ನೊಂದು ವೃತ್ತಕ್ಕೆ ತಲುಪಬೇಕಾದರೆ ಸುಮಾರು 2 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾಗಿತ್ತು.

ನೂತನ ರಸ್ತೆ ನಿರ್ಮಾಣ ದಿಂದ ಈ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.ಈ  ರಸ್ತೆ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ  ಅನುಕೂಲವಾಗಿದೆ  ಎಂದರು.ಬಿಬಿಎಂಪಿ ವತಿಯಿಂದ ರೂ 10 ಲಕ್ಷ ವೆಚ್ಚದಲ್ಲಿ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೀರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry