ಗುರುವಾರ , ಮೇ 19, 2022
20 °C

ನೂತನ ರಾಷ್ಟ್ರೀಯ ಹೆದ್ದಾರಿಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ಎರಡು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರವಾರ ಉಪ ವಿಭಾಗವು ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ.ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ಕ್ಕೆ ಸಂಪರ್ಕ ಕಲ್ಪಿಸುವ ಕುಮಟಾ-ತಡಸ ಮತ್ತು ಬಿಸಿಲಕೊಪ್ಪ (ಶಿರಸಿ) ಮೊಣಕಾಲ್ಮುರು (ಚಿತ್ರ ದುರ್ಗ) ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಗಳಾಗಿ ಪರಿವರ್ತನೆ ಆಗುವ ಸಾಧ್ಯತೆಯಿದೆ.ಸದಾಶಿವಗಡ (ಕಾರವಾರ)-ಲೊಂಡಾ ರಾಜ್ಯ ಹೆದ್ದಾರಿಯನ್ನೂ ರಾಷ್ಟ್ರೀಯ ಹೆದ್ದಾರಿಯಾಗಿ ಪರಿ ವರ್ತಿಸುವ ಸಾಧ್ಯತೆಗಳಿತ್ತು. ಆದರೆ ಅರಣ್ಯ ಕಾಯಿದೆ ತೊಡಕಿನಿಂದಾಗಿ ಸದ್ಯಕ್ಕೆ ಈ ಪ್ರಸ್ತಾವಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯುಂಟಾಗಿದೆ.ಜಿಲ್ಲೆಯಲ್ಲಿ 17, 63, ಮತ್ತು 206 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಮೂರು ರಾಷ್ಟ್ರೀಯ ಹೆದ್ದಾರಿ ಗಳಿವೆ. ಇವುಗಳ ಪೈಕಿ ರಾಷ್ಟ್ರೀಯ ಹೆದ್ದಾರಿ 17 ಮತ್ತು 63ರಲ್ಲಿ ಚತುಸ್ಪಥ ನಿರ್ಮಾಣವಾಗಲಿದೆ.

ಈ ಎರಡು ಹೆದ್ದಾರಿಗಳ ಚತುಷ್ಪಥ ಕಾಮಗಾರಿ ಮುಗಿದ ನಂತರ ರಾ.ಹೆ. 206ರಲ್ಲೂ ಚತುಷ್ಪಥ ನಿರ್ಮಾಣ ಆಗಬಹುದು ಎನ್ನುತ್ತಾರೆ ಅಧಿಕಾರಿ ಗಳು. ಚತುಷ್ಪಥ ನಿರ್ಮಾಣವಾದರೆ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಡಿಕೊಳ್ಳಲಿದೆ.ಅಧಿಕಾರಿ, ಸಿಬ್ಬಂದಿಗೆ ಚಿಂತೆ: ಜಿಲ್ಲೆಯ ಮೂರು ಹೆದ್ದಾರಿಯಲ್ಲಿ ಚತುಷ್ಪಥ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರವಾರ ಉಪ ವಿಭಾಗದ ಕಾರ್ಯ ಚಟುವಟಿಕೆಗಳು ಸ್ಥಗಿತ ಗೊಳ್ಳಲಿದೆ. ಮುಂದೇನು ಎನ್ನುವ ಚಿಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಾಡುತ್ತಿದೆ.ರಾ.ಹೆ. ಸಂಖ್ಯೆ  ಬದಲು: ಜಿಲ್ಲೆಯಲ್ಲಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಗಳು ಸದ್ಯದಲ್ಲೇ ಬದಲಾಗಲಿದೆ. ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ- 17, ಇನ್ನು ರಾ.ಹೆ.- 66 ಆಗಲಿದೆ. ಬಾಳೆಗುಳಿ- ಆಂಧ್ರಪ್ರದೇಶ- 63, ರಾ.ಹೆ. 52 ಆಗಲಿದೆ. ಹೊನ್ನಾವರ-ತುಮಕೂರು- 206 ರಾ.ಹೆ. 69 ಆಗಲಿದೆ.

ರಾಷ್ಟ್ರದಾದ್ಯಂತ ಇರುವ ಎಲ್ಲ ಹೆದ್ದಾರಿಗಳ ಸಂಖ್ಯೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರುವ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆಗಳು ಬದಲಾಗಲಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.