ನೂತನ ಶಾಖೆ

7

ನೂತನ ಶಾಖೆ

Published:
Updated:

ಬೆಂಗಳೂರು: ಎಡಿಲ್‌ವೈಸ್ ಟೋಕಿಯೊ ಜೀವ ವಿಮಾ ಕಂಪೆನಿ ದಕ್ಷಿಣ ಭಾರತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು ಜಯನಗರದಲ್ಲಿ ನೂತನ ಶಾಖೆ ತೆರೆದಿದೆ.ಕಂಪೆನಿ ಕಾರ್ಯಕಾರಿ ನಿರ್ದೇಶಕ ಜನ್ ಹೆಮ್ಮಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವಾಗಿ ಮಾಹಿತಿ ನೀಡಿದರು.

ದೇಶದಲ್ಲಿ ಇದು 38ನೇ ಶಾಖೆಯಾಗಿದ್ದು, ದಕ್ಷಿಣ ಭಾಗದಲ್ಲಿ ನಾಲ್ಕನೆಯದಾಗಿದೆ. ಈಗಾಗಲೇ ಹೈದರಾಬಾದ್, ಮಂಗಳೂರು ಮತ್ತು ವಿಜಯವಾಡಗಳಲ್ಲಿ ಶಾಖೆ ತೆರೆಯಲಾಗಿದೆ.  2015ರ ವೇಳೆಗೆ ರಾಜ್ಯದಲ್ಲಿ ಲಕ್ಷ ಜನರಿಗೆ ವಿಮೆ ಸೌಲಭ್ಯ ಒದಗಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.ಕಂಪೆನಿಯಿಂದ ದಕ್ಷಿಣ ಭಾಗದಲ್ಲಿ 3000 ವೈಯಕ್ತಿಕ ಹಣಕಾಸು ಸಲಹೆಗಾರರನ್ನು ನೇಮಿಸಿ, ಅವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುವುದು. ಇದು ಗ್ರಾಹಕರ ಸೇವೆಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry