ಮಂಗಳವಾರ, ಮಾರ್ಚ್ 9, 2021
18 °C

ನೂತನ ಶೌಚಾಲಯ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ಶೌಚಾಲಯ ಉದ್ಘಾಟನೆ

ಬೆಂಗಳೂರು: ಕೃಷ್ಣರಾಜಪುರದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯ ಕಟ್ಟಡವನ್ನು ಭಾನುವಾರ ಶಾಸಕ ಭೈರತಿ ಬಸವರಾಜು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಲ್ಲವನ್ನು ಸರ್ಕಾರಿ ಅನುದಾನದಲ್ಲಿಯೇ ಅಭಿವೃದ್ದಿಗೊಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನೆರವಾಗಬೇಕು’ ಎಂದು ಅವರು ಹೇಳಿದರು.‘ಖಾಸಗಿ ಸಂಸ್ಥೆ ಶೌಚಾಲಯ ನಿರ್ಮಿಸಿ ಕೊಟ್ಟಿರುವುದು ಹೆಮ್ಮೆ ವಿಷಯ. ಶಾಲೆಗೆ ಅಗತ್ಯವಿರುವ ಪೀಠೋಪರಕಣಗಳನ್ನು ಕೊಡಿಸುತ್ತೇನೆ’ ಎಂದು ತಿಳಿಸಿದರು.‘ಸ್ಥಳೀಯ ನಿವಾಸಿಗಳು ಶಾಲೆಯ ಬಳಿಯಲ್ಲಿಯೇ ಕಸವನ್ನು ತಂದು ಸುರಿಯುತ್ತಾರೆ. ಇದರಿಂದಾಗಿ ಶಾಲೆಯ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ  ಪಾಲಿಕೆ ನಿಗದಿಪಡಿಸಿದ ಸ್ಥಳದಲ್ಲಿಯೇ ಕಸ ಸುರಿಯಬೇಕು’ ಎಂದು ಬಿಬಿಎಂಪಿ ಸದಸ್ಯ ಶ್ರೀಕಾಂತ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.