ಶುಕ್ರವಾರ, ಮೇ 14, 2021
21 °C

ನೂತನ ಸಚಿವರು, ಶಾಸಕರಿಗೆ ಸನ್ಮಾನ 9ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಆರ್. ಪಾಟೀಲ, ಸಚಿವೆ ಉಮಾಶ್ರಿ, ಶಾಸಕರಾದ ಎಚ್.ವೈ. ಮೇಟಿ, ಸಿದ್ದುನ್ಯಾಮಗೌಡ, ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ ಮತ್ತು ವಿಜಯಾನಂದ ಕಾಶಪ್ಪನವರ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಜಿಲ್ಲೆಯ ಮತದಾರರಿಗೆ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮವನ್ನು ಇದೇ 9ರಂದು ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ.ಪಕ್ಷದ ಕಾರ್ಯಾಲಯದಲ್ಲಿ ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲು ತೀರ್ಮಾನಿಸಲಾಯಿತು.ಜಿಲ್ಲೆಯ ವಿವಿಧ ಬ್ಲಾಕ್ ಅಧ್ಯಕ್ಷರಾದ ಬಾಗಲಕೋಟೆಯ ಸದಾಶಿವ ಕೊಡಬಾಗಿ, ಬಾದಾಮಿಯ ಆನಂದ ದೊಡಮನಿ, ಜಮಖಂಡಿಯ ಶ್ರಿನಾಥ ನವನೆ, ಮುಧೋಳದ ಮಾದೇವ ಮಾದರ, ಹುನಗುಂದ ಬಸವರಾಜ ಹೊಸಮನಿ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಲಹೆ ನೀಡಿದರು.ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಹಾದಿಮನಿ, ಜಿಲ್ಲಾ ಉಪಾಧ್ಯಕ್ಷರಾದ ಅಡಿವೆಪ್ಪಾ ಚಂದಾವರಿ, ಯಮನಪ್ಪ ದಳಪತಿ, ಅಭಿನಂದನಾ ಸಮಾರಂಭ ಪಕ್ಷದ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಯ ಮತದಾರರಿಗೆ ಗೌರವ ಸೂಚಿಸುವ ಸಮಾರಂಭವಾಗಲಿದ್ದು ಎಲ್ಲರೂ ಶಕ್ತಿ ಮೀರಿ ಶ್ರಮಿಸೋಣ ಎಂದರು.ಒಪ್ಪಿಗೆ: ಇದೇ ಸಂದರ್ಭದಲ್ಲಿ ಹೊಸದಾಗಿ ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲು ಸಭೆ ಒಪ್ಪಿಗೆ ಸೂಚಿಸಿತು.

ಜಿಲ್ಲಾ ಸಂಚಾಲಕ ಪ್ರೇಮನಾಥ ಗರಸಂಗಿ, ಜಿಲ್ಲಾ ಕಾರ್ಯದರ್ಶಿ ಯಶವಂತ ಕಾಳಮ್ಮನವರ, ಹಣಮಂತ ಕಾತರಕಿ, ಭೀಮಸಿ ದೊಡಮನಿ, ಬಸು ಬಂಡಿವಡ್ಡರ, ವಿ.ಆರ್. ಚವಾಣ, ದಶರಥ ಸಂಶಿ, ಪರಶುರಾಮ ಸನಕ್ಯಾನವರ, ಹಣಮಂತ ಬೆಣ್ಣೂರ, ಬಸವರಾಜ ಕಿರಸೂರ, ರಾಮಣ್ಣ ಕಿರಸೂರ, ಉಮಾಪತಿ ನೀಲನಾಯಕ ಸೇರಿದಂತೆ ಮುಂತಾದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.