ಗುರುವಾರ , ಮೇ 28, 2020
27 °C

ನೂಪುರ ಭ್ರಮರಿ ನೃತ್ಯ ವಿಮರ್ಶೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕುರಿತ ಪ್ರತಿಷ್ಠಿತ ದ್ವೈಮಾಸಿಕ ಪತ್ರಿಕೆ ‘ನೂಪುರ ಭ್ರಮರಿ’ ನೃತ್ಯ ಕ್ಷೇತ್ರದ ವಿಮರ್ಶಕರನ್ನು ಗುರುತಿಸಿ ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ’ ಸ್ಪರ್ಧೆ ಆರಂಭಿಸುತ್ತಿದೆ.2010 ಜನವರಿ- ಡಿಸೆಂಬರ್ ಅವಧಿಯಲ್ಲಿ ರಾಜ್ಯದ ಕನ್ನಡ, ಇಂಗ್ಲಿಷ್ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ, ನಾಟ್ಯ ಸಂಬಂಧಿ ಪ್ರದರ್ಶನ, ರಂಗಪ್ರವೇಶ, ಸಮ್ಮೇಳನ, ಉತ್ಸವಗಳ ಕುರಿತ ವಿಮರ್ಶೆ ಕಳಿಸಬಹುದಾಗಿದೆ. ಒಬ್ಬ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದೆ.  ಇದಲ್ಲದೆ ಕಲಾವಿದರು, ಗುರು-ಶಿಕ್ಷಕರು, ಕಲಾಸಕ್ತರು ಕೂಡ ವಿಮರ್ಶಕರ ಹೆಸರನ್ನು ಸೂಚಿಸಬಹುದು. ನೃತ್ಯಕ್ಷೇತ್ರದ ಹಿರಿಯ ವಿದ್ವಾಂಸರು ನಿರ್ಣಾಯಕರಾಗಲಿದ್ದಾರೆ.ಲೇಖಕರು ತಮ್ಮ ಅತ್ಯುತ್ತಮವೆನಿಸುವ 3 ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಂಚೆ ಇಲ್ಲವೇ ಈಮೇಲ್ ಮೂಲಕ ಜನವರಿ 15ರ ಒಳಗೆ ತಲುಪುವಂತೆ ಕಳುಹಿಸಬೇಕು. ಪ್ರತ್ಯೇಕವಾಗಿ ಸ್ವವಿವರ ಮತ್ತು ವಿಮರ್ಶೆ ವಿವರಗಳನ್ನು ಲಗತ್ತಿಸಬೇಕು.ಅತ್ಯುತ್ತಮ ವಿಮರ್ಶೆ ಮತ್ತು ಉತ್ತಮ ನಾಮ ನಿರ್ದೇಶನಕ್ಕೆ ಫೆ. 13 ರಂದು ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನ ಪತ್ರ, ಫಲಕ, ನಗದು ಮತ್ತು ಫಲ ತಾಂಬೂಲಗಳನ್ನು ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಪ್ರವೇಶ ಕಳುಹಿಸಬೇಕಾದ ವಿಳಾಸ:  ಬಿ.ಎನ್. ಮನೋರಮಾ, ಸಂಪಾದಕರು, ‘ನೂಪುರ ಭ್ರಮರಿ’, ನಂ.104, ಕೌಶಲ್ ರೀಜೆನ್ಸಿ, 1ನೇ ಅಡ್ಡರಸ್ತೆ, ಪ್ರಕಾಶ ನಗರ. ದೂ: 99641 40927, 94817 65544.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.