ಶುಕ್ರವಾರ, ಮೇ 7, 2021
25 °C

ನೃತ್ಯ, ಯಕ್ಷಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್ಯೋತ್ಸವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶನಿವಾರ ಸಂಜೆ ನೂಪುರ ನೃತ್ಯ ತಂಡದಿಂದ ಬೇಲೂರಿನ ಹೊಯ್ಸಳ ದೇಗುಲ ಕಥೆ ಆಧರಿಸಿದ ನೃತ್ಯರೂಪಕ (ಸಂಯೋಜನೆ: ಗುರು ಲಲಿತಾ ಶ್ರೀನಿವಾಸನ್).ಈ ನೃತ್ಯ ಉತ್ಸವದಲ್ಲಿ ಶಕ್ತಿ, ಸಾಮರ್ಥ್ಯ ಬಿಂಬಿಸುವ ತಾಂಡವ ಮತ್ತು ಲಾವಣ್ಯ ಬಿಂಬಿಸುವ ಲಾಸ್ಯವನ್ನು ಸಮನಾಗಿ ಬಳಸಿಕೊಳ್ಳಲಾಗಿದೆ. ಬೇಲೂರಿನ ಚೆನ್ನಕೇಶವ ದೇವಾಲಯದ ಇತಿಹಾಸವನ್ನು ನೃತ್ಯ ಮತ್ತು ಕಲೆಯ ಅದ್ಭುತ ಸಂಯೋಜನೆಯ ಮೂಲಕ ಪ್ರೇಕ್ಷಕರ ಮುಂದಿಡುವ ಯತ್ನ ಇದು.ಬೇಲೂರು ದೇವಸ್ಥಾನದ ಕುರಿತು ಹಲವು ಐತಿಹ್ಯಗಳಿವೆ. ಇದು ಸಮುದ್ರಮಂಥನದ ಸಮಯದಲ್ಲಿ ಸಿಕ್ಕಿದ ಅಮೃತವನ್ನು ಹಂಚಲು ಮಹಾವಿಷ್ಣು ಮೋಹಿನಿ ಅವತಾರ ತಾಳಿದ ಸ್ಥಳ ಎಂದೂ ಹೇಳಲಾಗುತ್ತದೆ. ದೇವಾಲಯದ ಗೋಡೆಯಲ್ಲಿ ಕೆತ್ತಲಾಗಿರುವ ಮದನಿಕೆಯರು ಸುಗ್ಗಿಯ ಸಮಯದಲ್ಲಿ ನರ್ತಿಸುತ್ತ ತಮ್ಮ ಸಂಭ್ರಮದಲ್ಲಿ ಭಾಗಿಯಾಗುವಂತೆ ಚೆನ್ನಕೇಶವನನ್ನು ಕರೆಯುತ್ತಾರೆ.ಸ್ಥಳ: ಗಾಜಿನ ಮನೆ, ರಾಜಭವನ  ಸಂಜೆ 6.30. ಈ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ. ಆಹ್ವಾನ ಪತ್ರಿಕೆಗಾಗಿ 98455 17610.ದಿ ಡ್ರೀಮ್ ಫುಲ್‌ಫಿಲ್ಡ್

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ: ಶನಿವಾರ `ನಾಟ್ಯಲಕ್ಷಣ~ ಮತ್ತು ಇಂಡೊ ಜರ್ಮನ್ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ `ದಿ ಡ್ರೀಮ್ ಫುಲ್‌ಫಿಲ್ಡ್~ ನೃತ್ಯರೂಪಕ (ನೃತ್ಯ ಸಂಯೋಜನೆ: ಉಷಾ ವೆಂಕಟೇಶ್ವರನ್. ಸಂಗೀತ: ತಿರುಮಲೆ ಶ್ರೀನಿವಾಸ. ರಚನೆ: ಹೇಮಾ ದೇವರೆ).`ದಿ ಡ್ರೀಮ್ ಫುಲ್‌ಫಿಲ್ಡ್~ 10ನೇ ಶತಮಾನದಲ್ಲಿ ದಕ್ಷಿಣ ಭಾರತ ಮತ್ತು ಪೂರ್ವ ಕರಾವಳಿ ಆಳುತ್ತಿದ್ದ, ಆಗ್ನೇಯ ಏಷ್ಯಾದಲ್ಲಿ ಬಹುಮಟ್ಟಿಗೆ ಹಿಡಿತ ಹೊಂದಿದ್ದ ರಾಜೇಂದ್ರ ಚೋಳನ ಕಥೆ. ತಂದೆ ರಾಜ ರಾಜ ಚೋಳನ ಜತೆ ತಂಜಾವೂರಿನ ಬೃಹದೀಶ್ವರ ದೇವಾಲಯ ನಿರ್ಮಿಸಿದ ನಂತರ ರಾಜೇಂದ್ರ ಚೋಳ, ಆಗ್ನೇಯ ಏಷ್ಯಾದವರೆಗೂ ಸಾಮ್ರಾಜ್ಯ ವಿಸ್ತರಿಸುತ್ತಾನೆ.ಈಗಿನ ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ ಆತನ ಆಳ್ವಿಕೆಗೆ ಒಳಪಟ್ಟಿತ್ತು. ಚೀನಾದವರೆಗೆ ವಾಣಿಜ್ಯ, ವಹಿವಾಟು ವಿಸ್ತರಿಸಿತ್ತು. ಸಾಮ್ರಾಜ್ಯ ವಿಸ್ತರಿಸುವ ಆತನ ಕನಸು, ಅದರಲ್ಲಿ ಯಶಸ್ವಿಯಾಗುವ ರೀತಿ `ದಿ ಡ್ರೀಮ್ ಫುಲ್‌ಫಿಲ್ಡ್~  ನೃತ್ಯರೂಪಕದಲ್ಲಿ ಇದೆ.ಈ ನೃತ್ಯ ನಿರ್ದೇಶಿಸಿರುವ ಉಷಾ ವೆಂಕಟೇಶ್ವರನ್ ಭರತನಾಟ್ಯ, ಮಣಿಪುರಿ ಮತ್ತು ಕಥಕ್ ಮೂರು ನೃತ್ಯ ಪ್ರಕಾರಗಳಲ್ಲೂ ಪರಿಣತಿ ಸಾಧಿಸಿದ್ದಾರೆ. ದೇಶ, ವಿದೇಶಗಳಲ್ಲಿ ಹಲವು ನೃತ್ಯ ಕಾರ್ಯಕ್ರಮ ನೀಡಿದ್ದು, ರಷ್ಯಾದ ಪ್ರಮುಖ ಸಾಂಸ್ಕೃತಿಕ ಸಂಸ್ಥೆ `ಜಿಐಟಿಟಿಐಎಸ್~ನಲ್ಲಿ ನೃತ್ಯ ಗುರುವಾಗಿ ಕೆಲಸ ಮಾಡಿದ್ದಾರೆ. ಅತಿಥಿಗಳು: ಜರ್ಮನಿ ಕೌನ್ಸಲ್ ಜನರಲ್ ಹಾನ್ಸ್ ಗುಂಟರ್ ಲೊಫ್ಲರ್, ಡೆಪ್ಯುಟಿ ಕೌನ್ಸಲ್ ಜನರಲ್ ಫ್ರೆಡ್ರಿಕ್ ರಾನ್.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 7. ಈ ನೃತ್ಯರೂಪಕಕ್ಕೆ ಆಹ್ವಾನ ಪತ್ರದ ಮೂಲಕ ಮಾತ್ರ ಪ್ರವೇಶ. ಆಹ್ವಾನ ಪತ್ರಗಳು ನಂ 7/2, 1ನೇ ಮಹಡಿ, 2ನೇ ಮುಖ್ಯರಸ್ತೆ, ಪ್ಯಾಲೇಸ್ ಕ್ರಾಸ್ ರಸ್ತೆಯಲ್ಲಿನ  (ಮೆಟ್ರೊ ಫೋರ್ಡ್ ಶೋರೂಮ್) ಮಂಡಳಿಯ ಕಚೇರಿಯಲ್ಲಿ ಲಭ್ಯ.ಶ್ರೀಕೃಷ್ಣ ಗಾರುಡಿ

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ: ಶನಿವಾರ ಭೂಪಸಂದ್ರದಲ್ಲಿ ದತ್ತಾತ್ರಿ ಅರಳಿಕಟ್ಟೆ ಮತ್ತು ತಂಡದಿಂದ `ಲಂಕಾ ದಹನ~ ಯಕ್ಷಗಾನ. ಭಾನುವಾರ ಅರಕೆರೆಯಲ್ಲಿ ಕರ್ನಾಟಕ ಕಲಾದರ್ಶಿನಿ ಮಕ್ಕಳಿಂದ `ಶ್ರೀಕೃಷ್ಣ ಗಾರುಡಿ~ ಯಕ್ಷಗಾನ ಪ್ರದರ್ಶನ (ಭಾಗವತಿಕೆ: ಶ್ರೀನಗರ ವೇಣುಗೋಪಾಲ. ಮೃದಂಗ: ನಾಗರಾಜ ಎಡಮೊಗೆ. ಚಂಡೆ: ಶ್ರೀರಾಮ ಬಾಯರಿ ಕೂರಾಡಿ). ನಿತ್ಯ ಸಂಜೆ 6.30. ಮಾಹಿತಿಗೆ: 98440 32972

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.