ಗುರುವಾರ , ಫೆಬ್ರವರಿ 25, 2021
29 °C

ನೃತ್ಯ ರೂಪಕದಿಂದ ಸಿಡಿಮಿಡಿಗೊಂಡ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೃತ್ಯ ರೂಪಕದಿಂದ ಸಿಡಿಮಿಡಿಗೊಂಡ ಸಚಿವ

ಮಂಡ್ಯ: ಸಮೂಹ ನೃತ್ಯ ಪ್ರದರ್ಶನದ ವೇಳೆ ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್‌ ಮತ್ತು ಗಣಪತಿ ಅವರ ಭಾವಚಿತ್ರಗಳನ್ನು ಬಳಸಿದ್ದರಿಂದ ಸಿಡಿಮಿಡಿಗೊಂಡ ಸಚಿವ ಡಿ.ಕೆ. ಶಿವಕುಮಾರ್‌ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಗರದ ಕ್ರೀಡಾಂಗಣದಲ್ಲಿ ನಡೆದಿದೆ.

ಚಿತ್ರನಟ ರವಿಚಂದ್ರನ್‌ ಅವರ ‘ಶಾಂತಿ ಕ್ರಾಂತಿ’ ಚಲನಚಿತ್ರದ ‘ಹುಟ್ಟುದ್ಯಾಕೆ, ಸಾಯೋದ್ಯಾಕೆ ಏನಾದರೂ ಸಾಧಿಸಿ ಹೋಗೋಕೆ’ ಎಂಬ ಹಾಡಿಗೆ ಶಾಲೆಯ ಮಕ್ಕಳು ನೃತ್ಯ ರೂಪಕ ಮಾಡುತ್ತಿದ್ದರು.

ನೃತ್ಯ ರೂಪಕದ ನಡುವೆ ಮಕ್ಕಳು ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್‌ ಮತ್ತು ಗಣಪತಿ ಅವರ ಭಾವಚಿತ್ರಗಳನ್ನು ಹಿಡಿದು ಬಂದರು. ಇದರಿಂದ ಸಿಡಿಮಿಡಿಗೊಂಡ ಸಚಿವ ಶಿವಕುಮಾರ್‌ ಕೂಡಲೇ ಹಾಡನ್ನು ನಿಲ್ಲಿಸಲು ಸೂಚಿಸಿದರು.

ಅಲ್ಲಿಯೇ ಇದ್ದ ಡಿಡಿಪಿಐ ಶಿವಮಾದಪ್ಪ ಅವರನ್ನು ಕರೆದು, ‘ಯಾಕೆ ಇಂತಹ ರೂಪಕ ಮಾಡಲು ಅವಕಾಶ ನೀಡಿದಿರಿ. ಆತ್ಮಹತ್ಯೆ ಮಾಡಿಕೊಂಡಿರುವವರು ಆದರ್ಶವಾಗುತ್ತಾರೆಯೇ? ಕೂಡಲೇ ನೃತ್ಯ ನಿಲ್ಲಿಸಿ’ ಎಂದರು.

ಸಚಿವರ ಸೂಚನೆಯಂತೆ ನೃತ್ಯ ರೂಪಕವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.