ನೆಟ್‌ಬಾಲ್: ಹಾಸನಕ್ಕೆ ಪ್ರಶಸ್ತಿ

7

ನೆಟ್‌ಬಾಲ್: ಹಾಸನಕ್ಕೆ ಪ್ರಶಸ್ತಿ

Published:
Updated:

ಧಾರವಾಡ: ಹಾಸನ ಜಿಲ್ಲಾ ತಂಡದ ಬಾಲಕ-ಬಾಲಕಿಯರು  ಜಿಲ್ಲಾಡಳಿತ, ಜಿ.ಪಂ, ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಲ್ಲಸಜ್ಜನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನ ಬಾಲಕ-ಬಾಲಕಿಯರ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.14 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌ನಲ್ಲಿ ಹಾಸನ ತಂಡ ಆತಿಥೇಯ ಧಾರವಾಡವನ್ನು 26-10ರಿಂದ ಮಣಿಸಿದರೆ, ಇದೇ ವಯೋಮಿತಿಯ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ತಂಡವನ್ನು 23-16 ಪಾಯಿಂಟ್‌ಗಳಿಂದ ಸೋಲಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಾವಣಗೆರೆ ತಂಡವನ್ನು 29-16ರಿಂದ ಸೋಲಿಸಿದ ಹಾಸನ  ಪ್ರಶಸ್ತಿ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry