ನೆನಪು ಮಧುರ...

7

ನೆನಪು ಮಧುರ...

Published:
Updated:
ನೆನಪು ಮಧುರ...

ಚಾಂದ್ ಸಿ ಮೆಹಬೂಬಾ ಹೋ ಮೇರಿ ಐಸಾ ಹಮ್ ನೆ ಸೋಚಾ ತಾ..., ಬಹಾರೋ ಫೂಲ್ ಬರ್ಸಾವೋ ಮೇರಾ ಮೆಹಬೂಬ ಆಯಾ ಹೈ..., ಯೇ ರಾತ್ ಭೀಗಿ, ಭೀಗಿ..., ರಿಮ್ ಜಿಮ್ ಗಿರೆ ಸಾವನ್ ಸುಲಗ್ ಸುಲಗ್ ಜಾಯೆ ಮನ್...!ಹೌದು. ಎಂದೋ ಕೇಳಿದ ಮಧುರ ಗೀತೆಗಳಿವು. ಮೈಸುಡುವ ಧಗೆಯಲ್ಲಿ ತಂಪು ಮಳೆ ಸುರಿದಂತೆ, ತಂಗಾಳಿ ಅಲೆ, ಅಲೆಯಾಗಿ ಸೋಕಿದಂತೆ... ಎಫ್‌ಎಂನಲ್ಲೋ, ಅಪರೂಪಕ್ಕೊಮ್ಮೆ ಟಿವಿಯಲ್ಲಿ ಕೇಳಿದಾಗ ಮನಸು ಆ ಕಾಲಕ್ಕೆ ಓಡುತ್ತದೆ. ಮಧುರ ನೆನಪುಗಳನ್ನು ಮೆಲುಕು ಹಾಕುತ್ತದೆ.ಸುಂದರನಗರ ಲಯನ್ಸ್ ಕ್ಲಬ್ ಈ ಮಾಧುರ್ಯಭರಿತ ಗೀತೆಗಳನ್ನು, ಅವನ್ನು ಹಾಡಿದ ಮಹಾನ್ ಗಾಯಕರನ್ನು ನೆನಪಿಸಿಕೊಳ್ಳಲು ಮುಂದಾಗಿದೆ.ಶನಿವಾರ ನಡೆಯಲಿರುವ ‘ಯುವರ್ಸ್‌ ಫಾರ್‌ಎವರ್’ ಕಾರ್ಯಕ್ರಮದಲ್ಲಿ ಮೊಹಮ್ಮದ್ ರಫಿ, ಮುಖೇಶ್, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರು ಅರ್ಧ ಶತಮಾನಗಳ ಹಿಂದೆ ಹಾಡಿದ ಗೀತೆಗಳೆಲ್ಲ ಅನಿಲ್ ಬಾಜ್‌ಪೈ, ವಿನೋದ್ ಶೇಷಾದ್ರಿ, ಜೋಸೆಫ್, ಸಂಪದ ಗೋಸ್ವಾಮಿ, ನೀಲಿಮಾ ಗೋಖಲೆ ಕಂಠದಲ್ಲಿ ಅನುರಣಿಸಲಿವೆ. ಕೇಳುಗರನ್ನು ಆ ಕಾಲಕ್ಕೆ ಕೊಂಡೊಯ್ಯಲಿವೆ.

ಈ ಕಾರ್ಯಕ್ರಮದ ಹಿಂದೆ ಉದಾತ್ತ ಉದ್ದೇಶವೊಂದಿದೆ. ಇಲ್ಲಿ ಸಂಗ್ರಹವಾಗುವ ಹಣವನ್ನು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಸುಂದರನಗರ ಲಯನ್ಸ್ ಸರ್ವೀಸ್ ಟ್ರಸ್ಟ್ ನಿರ್ಮಿಸಲಿರುವ ಆಸ್ಪತ್ರೆಗೆ ದೇಣಿಗೆಯಾಗಿ ನೀಡಲಾಗುವುದು.ದೇಣಿಗೆ ಪಾಸ್‌ಗಳು ಮಲ್ಲೇಶ್ವರದ ಕೆನರಾ ಯೂನಿಯನ್, ಕುಮಾರ ಪಾರ್ಕ್‌ನ ಚೆಟ್ಟೀಸ್ ಕಾರ್ನರ್, ಜಯನಗರದ ಕ್ಯಾಲಿಪ್ಸೊ, ಫೋರಂ ಮಾಲ್‌ನ ಲ್ಯಾಂಡ್‌ಮಾರ್ಕ್‌ಗಳಲ್ಲಿ ಲಭ್ಯವಿವೆ. ಬಾರ್ ಬಾರ್ ರಫಿ ಕ್ಲಬ್‌ನಲ್ಲಿಯೂ ಪಾಸ್‌ಗಳು ಲಭ್ಯ.ದೂ: 98867 79557.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 5ರಿಂದ 9 ಗಂಟೆ

                                                                                        

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry