ಶನಿವಾರ, ಮೇ 28, 2022
31 °C

ನೆಪ್ಚೂನ್ ಕಕ್ಷೆಯಲ್ಲಿ ಹೊಸ ಚಂದ್ರ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ನೆಪ್ಚೂನ್ ಗ್ರಹದ ಕಕ್ಷೆಯಲ್ಲಿ ಹೊಸ ಚಂದ್ರನನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.ನೆಪ್ಚೂನ್ ಗ್ರಹದ ಕಕ್ಷೆಯಲ್ಲಿ ಈಗಾಗಲೇ ಇಂತಹ 13 ಚಂದ್ರಗಳಿವೆ. ಈಗ ಪತ್ತೆಯಾಗಿರುವ ಚಂದ್ರ ಗಾತ್ರದಲ್ಲಿ ಅತಿ ಚಿಕ್ಕದಾಗಿದೆ. ನೆಪ್ಚೂನ್ ಗ್ರಹದಿಂದ 12 ಮೈಲಿಗಳ ಅಂತರದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.ಹಬಲ್ ದೂರದರ್ಶಕದ ಸಹಾಯದಿಂದ ಹೊಸ ಚಂದಿರನನ್ನು ಪತ್ತೆ ಹಚ್ಚಲಾಗಿದೆ ಎಂದು ನಾಸಾ ತಿಳಿಸಿದೆ. ಪ್ರತಿ 23 ಗಂಟೆಗಳಿಗೊಮ್ಮೆ ನೆಪ್ಚೂನ್ ಗ್ರಹಕ್ಕೆ ಒಂದು ಬಾರಿ ಪ್ರದಕ್ಷಿಣೆ ಹಾಕುವ ಈ ಚಂದ್ರನಿಗೆ ಎಸ್/2004 ಎನ್ 1 ಎಂದು ಹೆಸರಿಡಲಾಗಿದೆ.ಜುಲೈ 1ರಂದು ಕ್ಯಾಲಿಫೋರ್ನಿಯಾ ಸೆಟಿ (ಎಸ್‌ಇಟಿಐ) ಸಂಸ್ಥೆಯ ಮಾರ್ಕ್ ಶೋವಾಲ್ಟರ್ ಅವರು, ನೆಪ್ಚೂನ್ ಗ್ರಹದ ಬಳೆಯ ಸಂರಚನೆ ಕುರಿತು ಅಧ್ಯಯನ ಕೈಗೊಂಡಿದ್ದ ಸಂದರ್ಭದಲ್ಲಿ ಹೊಸ ಚಂದ್ರ ಪತ್ತೆಯಾಗಿದೆ ಎಂದು ನಾಸಾ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.