ಶುಕ್ರವಾರ, ಜೂನ್ 18, 2021
21 °C

ನೆಮ್ಮದಿಯ ಜೀವನಕ್ಕೆ ಆರೋಗ್ಯ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಮನುಷ್ಯ ನೆಮ್ಮದಿಯಾಗಿ ಜೀವನ ಮಾಡಲು ಆರೋಗ್ಯ ಅತ್ಯಗತ್ಯ. ನಾವು ಎಷ್ಟು ವರ್ಷ ಬದುಕಿದ್ದರೂ ಎಷ್ಟು ವರ್ಷ ಆರೋಗ್ಯದಿಂದ ಬದುಕಿದ್ದೇವೆ ಎಂಬುದನ್ನು ಪರಾಮರ್ಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋಮುಲ್ ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ತಿಳಿಸಿದರು.ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಭಾನುವಾರ ಆರ್.ಎಲ್.ಜಾಲಪ್ಪ ಆಸ್ಪತ್ರೆ, ನಾರಾಯಣ ಹೃದಯಾಲಯ ಹಾರ್ಟ್ ಸೆಂಟರ್, ಕೋಲಾರ ಜಿಲ್ಲಾ ಡೇರಿ ಫಾರ್ಮರ್ಸ್‌ ವೆಲ್‌ಫೇರ್ ಟ್ರಸ್ಟ್, ರೋಟರಿ ಸೆಂಟ್ರಲ್ ಮುಳಬಾಗಲು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ತಪಾಸಣೆಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ನಗರ ಪ್ರದೇಶಗಳಿಗೆ ಹೋಗಬೇಕಾದ ತೊಂದರೆ ತಪ್ಪಿಸಲು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.ರೋಟರಿ ಸಮಿತಿಯ ವಿ.ಆರ್.ಪ್ರಭಾಕರ್‌ಗುಪ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಮುಲ್ ಉಪ ವ್ಯವಸ್ಥಾಪಕ ಡಾ.ಸಿ.ಪುಣ್ಯಕೋಟಿ, ನಾರಾಯಣ ಹೃದಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅಧಿಕಾರಿ ಸುನಿಲ್‌ಕುಮಾರ್, ಡಾ.ಸುಧೀರ್,  ಡಾ.ಭಾನು, ಡಾ.ನವೀನ್, ವ್ಯವಸ್ಥಾಪಕ ಲೋಕೇಶ್, ಬೈರಕೂರು ವೈದ್ಯಾಧಿಕಾರಿ ಡಾ.ಸಂತೋಷ್‌ಕುಮಾರ್, ತಾಲ್ಲೂಕು ಪಂಚಾಯತಿ  ಸದಸ್ಯ ಶ್ರೀನಿವಾಸಗೌಡ, ಸದಸ್ಯ ರಾಮಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಈರಪ್ಪ, ಕಾರ್ಯದರ್ಶಿ ಎನ್.ನಾಗರಾಜ್, ವಿಸ್ತರಣಾಧಿಕಾರಿ ಆನಂದ್, ಮುಖಂಡರಾದ ನರಸಿಂಹರೆಡ್ಡಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.