ಬುಧವಾರ, ಏಪ್ರಿಲ್ 14, 2021
23 °C

ನೆರೆ ಸಂತ್ರಸ್ತರಿಗೆ ಆಶ್ರಯವಾಗದ ಮನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ:  ಕಳೆದ ವರ್ಷ ಅತಿವೃಷ್ಟಿಗೆ ಒಳಗಾಗಿರುವ ಗ್ರಾಮಗಳಲ್ಲಿ ಸರ್ಕಾರ ಕೆಲವು ಏಜೆನ್ಸಿಗಳ ಮೂಲಕ ಮನೆ ಕಟ್ಟುತ್ತಿದೆ. ಅದರಲ್ಲಿ ಭೂಸೇನೆ ನಿಗಮದವರು ಕಟ್ಟುತ್ತಿರುವ ಮನೆಗಳು ಕಳಪೆ ಮಟ್ಟದ್ದಾಗಿದ್ದು, ನಿರ್ಮಾಣ ಕಾರ್ಯವು ನಿಧಾನವಾಗಿದ್ದು ಹೀಗಾಗಿ ಸಂತ್ರಸ್ತರಿಗೆ ಮನೆಗಳು ಮಳೆಗಾಲದ ಒಳಗೆ ಬಳಕೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಆರೋಪಿಸಿದ್ದಾರೆ.ತಾಲ್ಲೂಕಿನಲ್ಲಿ ಭೂಸೇನಾ ನಿಗಮದವರು ಉಡಚಾಣದಲ್ಲಿ 120, ಕಲ್ಲೂರ 185, ಹಿಂಚಗೇರಾ 24, ಭೋಸಗಾ 45 ಮನೆಗಳನ್ನು ಕಟ್ಟುತ್ತಿದ್ದು, ಪ್ರತಿ ಮನೆಗೆ 1.30 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆದರೆ ಮನೆಗಳು ಮಾತ್ರ ಕಳಪೆ ಮಟ್ಟದ್ದಾಗಿವೆ ಅವುಗಳಿಗೆ ಬಳಸುವ ಸುಣ್ಣದ ಕಲ್ಲು ಮತ್ತು ಸಿಮೆಂಟ್ ಯೋಗ್ಯವಾಗಿಲ್ಲ. ಕಟ್ಟುತ್ತಿರುವ ಮನೆಗಳು ಇನ್ನೂವರೆಗೆ ಮುಗಿಯುತ್ತಿಲ್ಲ ಎಂದು ಅವರು ತಿಳಿಸಿದರು.ಮನೆಗಳು ಮುಗಿದ ಮೇಲೆ ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆ ಇವೆಲ್ಲವು ಆಗಬೇಕಾಗಿದೆ. ಆದರೆ ಸರ್ಕಾರಕ್ಕೆ ಕೇಳಿದರೆ ಏಪ್ರೀಲ್, ಮೇ ತಿಂಗಳಲ್ಲಿ ಸಂತ್ರಸ್ಥರಿಗೆ ಮನೆ ಕೊಡುವದಾಗಿ ಹೇಳುತ್ತಾರೆ. ಇಲ್ಲಿ ನೋಡಿದರೆ ಮನೆಗಳೆ ಮುಗಿಯುತ್ತಿಲ್ಲ ಮನೆಗಳ ನಿರ್ವಹಣೆಯ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗಾಗಿದ್ದು, ಒಂದು ದಿನವೂ ಕಟ್ಟುತ್ತಿರುವ ಮನೆಗಳನ್ನು ಪರಿಶೀಲನೆ ಮಾಡಿಲ್ಲ ಹೀಗಾಗಿ ಏಜನ್ಸಿಗಳ ಯಾರ ಭಯವಿಲ್ಲದ್ದಾಗಿದೆ. ಸರ್ಕಾರ ಖರ್ಚು ಮಾಡುತ್ತಿರುವ ಲಕ್ಷಾಂತರ ರೂ. ಸಂತ್ರಸ್ತರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.