ಭಾನುವಾರ, ಮಾರ್ಚ್ 7, 2021
32 °C

ನೆರೆ ಸಂತ್ರಸ್ತರ ಕೇಂದ್ರದಲ್ಲಿ ನೀರಿಗೆ ಪರದಾಟ

ಪ್ರಜಾವಾಣಿ ವಾರ್ತೆ/ –ಸಾಯಬಣ್ಣಾ ಗುಡುಬಾ Updated:

ಅಕ್ಷರ ಗಾತ್ರ : | |

ನೆರೆ ಸಂತ್ರಸ್ತರ ಕೇಂದ್ರದಲ್ಲಿ ನೀರಿಗೆ ಪರದಾಟ

ವಾಡಿ: ಇಲ್ಲಿನ ನೆರೆಸಂತ್ರಸ್ತರ ಪುನರ್ವಸತಿ ಕೇಂದ್ರ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ದಿನನಿತ್ಯ ಹನಿ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣ ವಾಗಿದೆ.ಇಲ್ಲಿಗೆ ಸಮೀಪದ ಬಳವಡಿಗಿ ಗ್ರಾಮದ ನೆರೆ ಸಂತ್ರಸ್ತರ ಪುನರ್ವಸತಿ ಕೇಂದ್ರದ ಒಳಗಡೆ ಹೋದರೆ ಸಾಕು, ನಮಗೆ ಅನ್ನ ಕೊಡಬೇಡಿ , ಗುಟುಕು ನೀರು ಕೊಡಿ ಎಂದು ಬೇಡಿ ಕೊಳ್ಳುತ್ತಾರೆ.ನಾಲ್ಕು ವರ್ಷದ ಹಿಂದೆ ಸಂಭವಿಸಿದ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ,  ಬೆಂಗಳೂರು ಇನ್ಫೋಸಿಸ್‌  ಸಂಸ್ಥೆ ಮತ್ತು ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸಹ­ಯೋಗದಲ್ಲಿ 2010ರಲ್ಲಿ ನೆರೆ ಸಂತ್ರಸ್ತರಿಗಾಗಿ ಬಳವಡಿಗಿ ಗ್ರಾಮದ ಹಳ್ಳೆದಾಚೆ ಇರುವ ಸರ್ಕಾರಿ ಖುಲ್ಲಾ ಜಾಗದಲ್ಲಿ ಪ್ರತಿ ಮನೆಗೆ ₨1.30ಲಕ್ಷ ವೆಚ್ಚ ಮಾಡಿ, ಸುಮಾರು 108 ಮನೆಗಳು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಅಥವಾ ಚರಂಡಿ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಿ­ಕೊಡುವಲ್ಲಿ ಸಂಬಂಧಿಸಿದವರು ವಿಫಲ­ವಾಗಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.ಮಳೆಗಾಲದಲ್ಲಿ ಅಲ್ಪಸ್ವಲ್ಪ ನೀರು ಸಿಗುತ್ತೆ, ಆದರೆ ಬೇಸಿಗೆ ಬಂದರೆ ನೆರೆಸಂತ್ರಸ್ತರ ಪ್ರದೇಶದಲ್ಲಿ ಕುಡಿಯಲು ನೀರು ಸಿಗುವುದಿಲ್ಲ. ದೂರದ ಎಲ್ಲಮ್ಮ ದೇವಿ ಹತ್ತಿರ ಇರುವ ತೆರೆದ ಬಾವಿಯಿಂದ ನೀರು ತರಬೇಕಾಗುತ್ತದೆ. ಆದರೆ ಬಿಸಿಲಿನ ತಾಪ ಹೆಚ್ಚಿದ ಪರಿಣಾಮ ಬಾವಿ ಬತ್ತಿದೆ. ಇದರಿಂದ ಹನಿ ನೀರಿಪರದಾಡಬೇಕಾದ ದುಸ್ಥಿತಿ ಇದೆ ಎಂದು ಸಾಬಮ್ಮ, ದೇವಕಿ ಲಾಡ್ಲಾಪುರ, ನಾಗಮ್ಮ ಮನ್ನಳ್ಳಿ ಅಳಲು  ತೋಡಿಕೊಂಡರು.ಹಾಳು ಬಿದ್ದ ನೀರಿನ ಗುಮ್ಮಿಗಳು: ಭಾರತ ನಿರ್ಮಾಣ ಕಿರು ನೀರು ಸರಬರಾಜು ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರದಲ್ಲಿ ನೀರಿನ ಗುಮ್ಮಿಗಳು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಗುಮ್ಮಿಗಳಿಗೆ ನೀರಿನ ಪೈಪ್‌ ಲೈನ್‌ ಅಳವಡಿಸದ ಪರಿಣಾಮ ಗುಮ್ಮಿಗಳು ನೀರುಪಯುಕ್ತವಾಗಿವೆ. ಆದರೆ ಕಳೆದ ವರ್ಷ ಬೇಸಿಗೆಯಲ್ಲಿ ನೀರಿನ ಉಲ್ಬಣವಾದಾಗ ಟ್ಯಾಂಕ್‌ರ ಮೂಲಕ ನೀರು ಪೂರೈಕೆ ಮಾಡಿದ್ದರೂ. ಆದರೆ ಈ ವರ್ಷ ಇತ್ತ ಅಧಿಕಾರಿಗಳು ಭೇಟಿ ಕೂಡ ನೀಡಿಲ್ಲ ಎಂದು ಸಂತ್ರಸ್ತರಾದ ಮಲ್ಲಪ್ಪ ಹೊನಗುಂಟಿ, ಯಲ್ಲಪ್ಪ ಕಟ್ಟಿಮನಿ, ಪ್ರಭು ಕ್ಯಾಲಬಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಟ್ಯಾಂಕರ್‌ ಮೂಲಕ ನೀರು ಸರಬರಾಜು’

ಬಳವಡಿಗಿ ಗ್ರಾಮದ ನೆರೆಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₨26ಲಕ್ಷ ವೆಚ್ಚದಲ್ಲಿ ಡಿಗ್ಗಿ ತಾಂಡದಿಂದ ಪೈಪ್‌ಲೈನ್‌ ಜೊಡಣೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕೊಂಚೂರು ಗ್ರಾಮಕ್ಕೆ ತಲುಪಿದೆ. ಇದರಿಂದ ಒಂದು ವಾರದೊಳಗೆ ನೀರು ಪೂರೈಕೆ ಮಾಡುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಎಂಜನಿಯರ್‌ ಪಂಚಾಯಿತಿಗೆ ತಿಳಿಸಿದ್ದಾರೆ. ಆದರೆ ಅಲ್ಲಿಯವರೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ತಹಶೀಲ್ದಾರ್‌ರ ಗಮನಕ್ಕೆ ತಂದಿದ್ದೆನೆ. ಪ್ರಸ್ತುತ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

– ಹಲಕರ್ಟಿ ಗ್ರಾಮ ಪಂಚಾಯಿತಿ ಪಿಡಿಒ ಗುರುನಾಥ ರಡ್ಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.