ಬುಧವಾರ, ಮಾರ್ಚ್ 3, 2021
19 °C

ನೆಲಕಚ್ಚಿದ ಜೆಡಿಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಕಚ್ಚಿದ ಜೆಡಿಯು

ಪಟ್ನಾ: ಬಿಹಾರದಲ್ಲಿ ಬಿಜೆಪಿ ಅಲೆಯ ಹೊಡೆತಕ್ಕೆ ಆಡಳಿತ ಪಕ್ಷ ಜೆಡಿಯು ಸಂಪೂರ್ಣ ನೆಲಕಚ್ಚಿದೆ. ಕಳೆದ ಬಾರಿ 20 ಸ್ಥಾನಗಳಲ್ಲಿ ಜಯಭೇರಿ ಮೊಳಗಿ­ಸಿದ್ದ ಪಕ್ಷ ಈ ಬಾರಿ ಕೇವಲ 2 ಸ್ಥಾನ ಗಳಿಸಿ ತೀವ್ರ ಹಿನ್ನಡೆ ಅನುಭವಿಸಿದೆ.ಒಟ್ಟು 40 ಸ್ಥಾನಗಳಲ್ಲಿ ಬಿಜೆಪಿ   ಹಾಗೂ ಮಿತ್ರಪಕ್ಷಗಳು (ಎಲ್‌ಜೆಪಿ, ಆರ್‌ಎಲ್‌ಎಸ್‌ಪಿ) 31 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿವೆ. ಕಳೆದ ಬಾರಿ ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದಿತ್ತು.ಇನ್ನು, ಆರ್‌ಜೆಡಿ ಹಾಗೂ ಮಿತ್ರಪಕ್ಷಗಳು (ಕಾಂಗ್ರೆಸ್‌, ಎನ್‌ಸಿಪಿ) ಏಳು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿವೆ.ಒಡಿಶಾದಲ್ಲಿ ನವೀನ್‌ ನಗೆ: ಮೋದಿ ಅಲೆಯ ನಡುವೆಯೂ ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌

ನೇತೃತ್ವದ ಬಿಜೆಡಿ, ಐತಿಹಾಸಿಕ ಜಯ ಸಾಧಿಸಿದೆ.ಪಕ್ಷವು, ಒಟ್ಟು 21 ಸ್ಥಾನಗಳಲ್ಲಿ 19ರಲ್ಲಿ ಗೆದ್ದಿದೆ. ಕಳೆದ ಬಾರಿ 11 ಸ್ಥಾನಗಳಲ್ಲಿ ಜಯ ಗಳಿಸಿತ್ತು.ನಿತೀಶ್‌ ಮನೆ ಭಣಭಣ: ಯಾವಾಗಲೂ ಪಕ್ಷದ ಕಾರ್ಯಕರ್ತ­ರಿಂದ, ಜನರಿಂದ ತುಂಬಿ ತುಳುಕುತ್ತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನಿವಾಸ ಹಾಗೂ ಜೆಡಿಯು ಕಚೇರಿ ಶುಕ್ರವಾರ ಬಿಕೋ ಎನ್ನುತ್ತಿತ್ತು. ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನದ ಕಾರಣ ಕಾರ್ಯಕರ್ತರು ಪಕ್ಷದ ಕಚೇರಿ ಹಾಗೂ ನಿತೀಶ್‌ ಅವರಿಂದ ದೂರ ಉಳಿದಿದ್ದರು.ಈ ಬಾರಿಯ ಲೋಕಸಭಾ ಚುನಾವಣೆ­ಯಲ್ಲಿ ಜೆಡಿಯು ರಾಜ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.