ಭಾನುವಾರ, ಏಪ್ರಿಲ್ 18, 2021
32 °C

ನೆಲಕಚ್ಚಿದ ಟೊಮ್ಯಾಟೊ ಬೆಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗಿದ ಗ್ರಾಹಕರು ಈಗ ರೈತ ಬೆಳೆದು ಮಾರಾಟಕ್ಕಾಗಿ ಮಾರುಕಟ್ಟೆಗೆ ತಂದರೆ ಟೊಮ್ಯಾಟೊ ಧಾರಣಿ ನೆಲಕಚ್ಚಿದೆ. ಪ್ರತಿ ಕೆ.ಜಿ. (ಜವಾರಿ) ಹಣ್ಣಿಗೆ 3 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ತಾಲ್ಲೂಕಿನ ಚಂದಾಪೂರ, ಗುಂಡಾ ಪೂರ, ಚಾಮನಾಳ ಮುಂತಾದ ಗ್ರಾಮಗಳಲ್ಲಿ ಹೆಚ್ಚಾಗಿ ರೈತರು ತೋಟಗಳನ್ನು ನಿರ್ಮಿಸಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯು ತ್ತಾರೆ.ಚಿನ್ನದ ಬೆಲೆಕಂಡ ತರಕಾರಿ ಬೆಲೆಯಿಂದ ಉತ್ತೇಜನಗೊಂಡ ರೈತರು ಟೊಮ್ಯಾಟೊವನ್ನು ಬಿತ್ತನೆ ಮಾಡಿದರು. ತಿಂಗಳ ಹಿಂದೆ ಸ್ವಲ್ಪ ಮಟ್ಟಿನ ಬೆಲೆಯಲ್ಲಿ ವ್ಯತ್ಯಾಸವಾದರು ಮಾರಾಟ ಮಾಡಿದ. ಈಗ ಐದಾರು ದಿನಗಳಲ್ಲಿ ಸಂಪೂರ್ಣವಾಗಿ ಬೆಲೆ ನೆಲಕಚ್ಚಿದೆ. ಪಟ್ಟಣಕ್ಕೆ ತಂದು ಮಾರಾಟ ಮಾಡಿದರು ಸಹ ವಾಹ ನದ ಬಾಡಿಗೆ ಗಿಟ್ಟುತ್ತಿಲ್ಲ. ಅನಿ ವಾರ್ಯವಾಗಿ ಜಾನುವಾರುಗಳಿಗೆ ಹಣ್ಣು ಹಾಕುತ್ತಿದ್ದೇವೆ ಎನ್ನುತ್ತಾರೆ ರೈತ ಭೀಮು ಚವ್ಹಾಣ.ಮಂಗಳವಾರ ಮಾರುಕಟ್ಟೆಗೆ ಹಣ್ಣು ತಂದು ಪುಕ್ಕಟೆಯಾಗಿ ವಿತರಿ ಸಿದೆ. ಇನ್ನೂ ಸ್ವಲ್ಪ ಉಳಿದವು ಚರಂಡಿಗೆ ಹಾಕಿ ಮನೆಯ ಕಡೆ ಹೊರಟಿರುವೆ. ಇನ್ನೂ ಟಂಟಂನಲ್ಲಿ ತಂದ ಹಣ್ಣಿನ ಕೂಲಿಯನ್ನು ಹೇಗೆ ಭರಿಸಬೇಕು. ಬೆವರು ಸುರಿಸಿ ದುಡಿದ ಶ್ರಮಕ್ಕೆ ಬೆಲೆಯಿಲ್ಲ ಎಂದು ಗೋಳಿ ಡುತ್ತಾನೆ ರೈತ ಶಿವಾಜಿ ನಾಯಕ.ಟೊಮೊಟು ಹಣ್ಣು ಕೇವಲ ಮೂರು ದಿನಗಳ ಮಾತ್ರ ಸಂಗ್ರಹಿಸಿ ಇಡಬಹುದು. ನಂತರ ಕೊಳೆತು ಹೋಗುತ್ತವೆ. ಸ್ಥಳೀಯವಾಗಿ ಶೈತ್ಯ ಗಾರವಿದ್ದರೆ ಹಲವು ದಿನಗಳವರೆಗೂ ಕಾಯ್ದಿಡಲು ಅವಕಾಶವಿದೆ ಎನ್ನು ವುದು ವ್ಯಾಪಾರಿ ರಫಿಕ್‌ನ ಅನಿಸಿಕೆ.

ಅಂದು ಚಿನ್ನದ ಬೆಲೆಕಂಡ ಟೊಮ್ಯಾಟೊ ಇಂದು ನೆಲಕಚ್ಚಿದೆ. ಟೊಮೊಟೊ ಬೆಳೆದ ರೈತರ ಕಣ್ಣು ಕೆಂಪಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.