ನೆಲಬಾಂಬ್ ಸ್ಫೋಟ: 3 ಯೋಧರ ಹತ್ಯೆ

7

ನೆಲಬಾಂಬ್ ಸ್ಫೋಟ: 3 ಯೋಧರ ಹತ್ಯೆ

Published:
Updated:

ರಾಯಪುರ (ಪಿಟಿಐ): ನೆಲದಲ್ಲಿ ಹುದುಗಿಸಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮ ಮಿನಿ ಟ್ರಕ್‌ನಲ್ಲಿ ಹೋಗುತ್ತಿದ್ದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಮೂವರು ಯೋಧರು ಮೃತಪಟ್ಟ ಘಟನೆ ಛತ್ತೀಸ್‌ಗಡದ ಮಾವೊವಾದಿಗಳ ಭದ್ರಕೋಟೆ ಎನಿಸಿದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದೆ.ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ನಕ್ಸಲ್ ಕಾರ್ಯಾಚರಣೆ ಪಡೆಯ ಹಿರಿಯ ಪೊಲೀಸ್ ಅಧಿಕಾರಿ ರಾಮ್ ನಿವಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ ಬಾಸ್ತನಾರ್ ಎಂಬ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಈ ಪ್ರದೇಶದಲ್ಲಿ ಸಲ್ವಾಜುಡಂ ಕಾರ್ಯಕರ್ತರ ನೆಲೆಗಳಿದ್ದು, ಯೋಧರು ಈ ನೆಲೆಗಳ ಬಳಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದರು ಎಂದು ನಿವಾಸ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry