ನೆಲಮಂಗಲ: ವಿಜೃಂಭಣೆಯ ರುದ್ರೇಶ್ವರ ರಥೋಥ್ಸವ

7

ನೆಲಮಂಗಲ: ವಿಜೃಂಭಣೆಯ ರುದ್ರೇಶ್ವರ ರಥೋಥ್ಸವ

Published:
Updated:

ನೆಲಮಂಗಲ: ಪಟ್ಟಣದ ಪೇಟೇಬೀದಿಯ ಶ್ರೀ ರುದ್ರೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ರುದ್ರೇಶ್ವರ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಚಿಂತನಾ ಗೋಷ್ಠಿ ನಡೆಸಿಕೊಟ್ಟರು. ರಥೋತ್ಸವದ ಪ್ರಯುಕ್ತ ಬುಧವಾರ ಧಾರ್ಮಿಕ ಆಚರಣೆಗಳು ನಡೆಯಲಿವೆ.ಚಿಂತನಾ ಗೋಷ್ಠಿ: ಬಸವಣ್ಣದೇವರ ಮಠದ `ಅರಿವಿನ ಅಂಗಳ~ ವೇದಿಕೆಯ ತಿಂಗಳ  ಚಿಂತನಾ ಗೋಷ್ಠಿ ಈ ಬಾರಿ ಹುಸ್ಕೂರಿನಲ್ಲಿ ಏರ್ಪಡಿಸಲಾಗಿತ್ತು.ಬಸವ ಪ್ರೌಢಶಾಲೆಯಲ್ಲಿ ನಡೆದ ಗೋಷ್ಠಿಯನ್ನು ಸಿದ್ಧಗಂಗೆಯ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.  ಅನ್ನದಾನೇಶ್ವರ ಸ್ವಾಮೀಜಿ  ಶಿಕ್ಷಕರಾದ ಸಂಗಮೇಶ ಬಿರಾದಾರ, ಷಣ್ಮುಖಪ್ಪ, ಚಂದ್ರಶೇಖರಪ್ಪ,  ಶಶಿ ಧರ್ ಮಾತನಾಡಿದರು. ಆರ್.ಜಿ. ಶ್ರೀಪಾದ ಭಕ್ತಿಗೀತೆ ಹಾಡಿದರು. ವಿದ್ಯಾರ್ಥಿನಿಯರು ವರದಕ್ಷಿಣೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಾಟಕ ಪ್ರದರ್ಶಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry