ಶುಕ್ರವಾರ, ಮೇ 7, 2021
25 °C

ನೆಲಮಂಗಲ: ವ್ಯಾನ್ ಕೆರೆಗೆ ಬಿದ್ದು 3 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ವ್ಯಾನ್ ಒಂದು ಕೆರೆಗೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ಸಮೀಪದ ಕುಲುವನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಬೆಂಗಳೂರಿನ ಪೀಣ್ಯ ನಿವಾಸಿಗಳಾದ ಜೋಗಲ್, ನಾಗೇಂದ್ರ ಮತ್ತು ನಾಗರಾಜ್ ಸಾವನ್ನಪ್ಪಿದವರು.ಘಟನೆಯಲ್ಲಿ ನಾಗರಾಜ್, ಅನಿಲ್, ಶಶಿಕುಮಾರ್, ಗಣೇಶ್, ಲಿಯೋ, ಸಂದೀಪ್, ಅನಿಲ್, ಪ್ರದೀಪ್, ಅಪ್ಜರ್, ತರುಣ್, ಅರುಣ್, ಆರ್.ಮಂಜುನಾಥ್ ಹಾಗೂ ಮಂಜುನಾಥ್ ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರು ಹಾಗೂ ಗಾಯಾಳುಗಳು ಸ್ನೇಹಿತರಾಗಿದ್ದು, ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಊರ್ಡಿಗೆರೆಯ ಸ್ನೇಹಿತನ ಮನೆಯಲ್ಲಿ ಏರ್ಪಡಿಸಿದ್ದ ಪಿತೃಪಕ್ಷದ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ವ್ಯಾನ್ ಕುಲುವನಹಳ್ಳಿ ಕೆರೆಗೆ ಮಗುಚಿ ಬಿದ್ದಿದೆ.ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡ ಜೋಗಲ್, ನಾಗೇಂದ್ರ ಮತ್ತು ನಾಗರಾಜ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.