ನೇಕಾರರ ಅಭಿವೃದ್ಧಿಗೆ ಆದ್ಯತೆ: ಎಂಡಿಎನ್

7

ನೇಕಾರರ ಅಭಿವೃದ್ಧಿಗೆ ಆದ್ಯತೆ: ಎಂಡಿಎನ್

Published:
Updated:

ಪಾವಗಡ: ರಾಜ್ಯದಲ್ಲಿ 50 ಲಕ್ಷ ಮಂದಿ ನೇಕಾರರಿದ್ದು, ಜಿಲ್ಲೆಯಲ್ಲಿ ಸುಮಾರು 2.20 ಲಕ್ಷ ನೇಕಾರರಿದ್ದಾರೆ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ತಿಳಿಸಿದರು. ತಾಲ್ಲೂಕಿನ ವೈ.ಎನ್.ಹೊಸಕೋಟೆ ಚೌಡೇಶ್ವರಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಚೌಡೇಶ್ವರಿ ಅಮ್ಮನವರ 20ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಶಾಸಕರ ಭವನದಲ್ಲಿ ತಿಂಗಳ ಮೂರನೇ ಶನಿವಾರ ಜಿಲ್ಲಾ ನೇಕಾರ ಸಂಘಗಳ ಸಮುದಾಯ ಸಭೆ ನಡೆಸಲಾಗುತ್ತಿದೆ. ನೇಕಾರರಿಗೆ ಸಿಗಬೇಕಾದ ಮೂಲಸೌಕರ್ಯ ಹಾಗೂ ಸಮಸ್ಯೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.ತೊಗಟವೀರ ಸಮಾಜದ ಕುಲಗುರುಗಳಾದ ದಿವ್ಯಜ್ಞಾನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನೇಕಾರ ತೊಗಟವೀರ ಕ್ಷತ್ರೀಯ ಸಂಘದ ಅಧ್ಯಕ್ಷ ಟಿ.ಬಿ.ವೆಂಕಟೇಶಪ್ಪ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ ನಾಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋಧ ದೇವರಾಜು, ರಾಜ್ಯ ನೇಕಾರ ಸಮುದಾಯಗಳ ಅಧ್ಯಕ್ಷ ಶಿವಪ್ಪಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಪಿ.ಸಿ.ಗೋಪಾಲ್, ಎಂ.ಸಿ.ಜಯರಾಮ್, ಧನಲಕ್ಷ್ಮಮ್ಮ, ಡಿ.ಎನ್.ನಾಗರಾಜು, ಎಲ್.ಕೆ.ರಘು, ಪದ್ಮ, ನೇಕಾರ ತೊಗಟವೀರ ಕ್ಷತ್ರೀಯ ಸಂಘದ ಗೌರವಾಧ್ಯಕ್ಷ ಕೆ.ವಿ. ರಾಮಚಂದ್ರಪ್ಪ, ಉಪಾಧ್ಯಕ್ಷ ಪಿ.ಟಿ.ವಿಶ್ವನಾಥ್, ಕಾರ್ಯದರ್ಶಿ   ಎಸ್.ಆರ್.ಎಂ.ಪ್ರಸಾದ್, ಮಾಜಿ ಅಧ್ಯಕ್ಷ ಧನಂಜಯ, ಜಯರಾಮ್, ಸರಗೂರು ತೊಗಟವೀರ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮುಕುಂದರಾಜು ಇನ್ನಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry