ನೇಕಾರರ ಸಹಕಾರಿ ಸಂಘ ಉದ್ಘಾಟನೆ

7

ನೇಕಾರರ ಸಹಕಾರಿ ಸಂಘ ಉದ್ಘಾಟನೆ

Published:
Updated:

ಗುಳೇದಗುಡ್ಡ: ಸಂಘ ಆರಂಭಿಸುವುದು ಸುಲಭ. ಆದರೆ, ಅದನ್ನು ಮುನ್ನಡೆ ಸುವುದು ಕಷ್ಟ.  ಸಂಘವನ್ನು ಒಗ್ಗಟ್ಟಿ ನಿಂದ ಮುನ್ನಡೆಸಲು ಸದಸ್ಯರ ಸಹಕಾರ ಅಗತ್ಯ ಎಂದು ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಮರಡಿಮಠದಲ್ಲಿ ನಡೆದ ನವ ದುರ್ಗಾ ಮಹಿಳಾ ವಿದ್ಯುತ್ ಮಗ್ಗಗಳ ನೇಕಾರರ ಸಹಕಾರಿ ಸಂಘವನ್ನು ಉದ್ಘಾಟಿಸಿ  ಅವರು ಮಾತನಾಡಿದರು.ಸಂಪಾದನೆಯಲ್ಲಿ ಅಲ್ಪ-ಸ್ವಲ್ಪ ಉಳಿತಾಯ ಮಾಡಿ ಭವಿಷ್ಯ ಜೀವನಕ್ಕೆ ಇಟ್ಟುಕೊಳ್ಳಬೇಕು. ಹೀಗೆ ಉಳಿತಾಯ ಮಾಡಿದ್ದನ್ನು ವೈಯಕ್ತಿಕ ಹಾಗೂ ಸಾಮಾಜಿಕ ತೊಂದರೆಗಳಿಗೆ ಬಳಸಬೇಕು ಎಂದು ಸಲಹೆ ನೀಡಿದರು.ಮಹಿಳೆಯರು ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದಲ್ಲಿ ಸಾಧನೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಸದುಪಯೋಗವಾಗಬೇಕು ಎಂದು ಹೇಳಿದರು.ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ನೇಕಾರರ ಸಂಘಗಳು ಜವಳಿ ಇಲಾಖೆಯೊಂದಿಗೆ ಒಡನಾಟದಲ್ಲಿದ್ದು, ಸರ್ಕಾರದಿಂದ ನೇಕಾರರಿಗೆ ಇರುವ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪುವಂತೆ ಯತ್ನಿಸಬೇಕು ಎಂದರು.ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹಾಗೂ ಮರಡಿಮಠದ  ಕಾಡಸಿದ್ಧೇಶ್ವರ ಶಿವಾಚಾರ್ಯ  ಸಾನ್ನಿಧ್ಯ ವಹಿಸಿ ಮಾತನಾಡಿದರು.ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಾ ಉದ್ನೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಡಾ.ಎಂ.ಎಸ್. ದಡ್ಡೆನವರ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲಾವತಿ ರಾಜೂರ ಮಾತನಾಡಿದರು.ಮಲ್ಲಿಕಾರ್ಜುನ ತೊರೆಗಲ್ಲ, ಜವಳಿ ಇಲಾಖೆ ಆರತಿ ಬಿದರಿಮಠ, ಮುತ್ತಣ್ಣ ಕಳ್ಳಿಗುಡ್ಡ, ಸಂಪತ್‌ಕುಮಾರ ರಾಠಿ, ಕಮಲು ಮಾಲಪಾಣಿ, ಅಶೋಕ ಹೆಗಡಿ, ಶ್ರೆಕಾಂತ ಭಾವಿ, ಬಸವರಾಜ ಯರಗಾ, ಸಂಘದ ಉಪಾಧ್ಯಕ್ಷೆ ರೂಪಾ ಬಳಿಗೇರಿ, ಕಾರ್ಯದರ್ಶಿ ಶ್ವೇತಾ ಭಾವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry