ಶುಕ್ರವಾರ, ಮೇ 20, 2022
27 °C

ನೇತ್ರದಾನದಿಂದ ಅಂಧತ್ವ ನಿವಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಣ್ಣು ಪ್ರಪಂಚವನ್ನು ನೋಡಲು ಇರುವ ಅದ್ಭುತ ಕೊಡುಗೆ. ನೇತ್ರ ದೋಷದಿಂದ ಮುಕ್ತರಾಗಿ ಆರೋಗ್ಯದಿಂದ ಇರುವುದರ ಜೊತೆಗೆ ಜೀವತಾವಧಿಯ ಕೊನೆಯಲ್ಲಿ ನೇತ್ರದಾನ ಮಾಡಿ ಅಂಧತ್ವವುಳ್ಳವರಿಗೆ ದೃಷ್ಠಿ ಕೊಡಬೇಕು ಎಂದು ಡಾ.ಕೆ.ಸುರೇಶ್ ತಿಳಿಸಿದರು. ನಗರದ ಹೆಗ್ಗೆರೆಯಲ್ಲಿ ಈಚೆಗೆ ಹೆಗ್ಗೆರೆ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ರೋಟರಿ ವತಿಯಿಂದ   ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ಪಾಳ್ಯಮೊಹಮದ್ ಮೊಹಿದ್ದೀನ್ ಮಾತನಾಡಿ ಸಂಘ ಸಂಸ್ಥೆಗಳು ಏರ್ಪಡಿಸುವ ಇಂತಹ ಶಿಬಿರಗಳಿಂದ ಬಡಜನರಿಗೆ ಸಹಾಯ ಆಗುತ್ತದೆ ಎಂದರು.ಸಮಿತಿ ಅಧ್ಯಕ್ಷ ಎಚ್.ನಂದೀಶಪ್ಪ ಸಮಿತಿ ನಡೆಸುತ್ತಿರುವ ಸಮಾಜ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ಸಾಯಿ ನೇತ್ರಾಲಯದ ಡಾ.ಕೆ.ಸುರೇಶ್ 31 ಜನರಿಗೆ ನೇತ್ರಚಿಕಿತ್ಸೆ ಮಾಡಿದರು. ಸಮಿತಿ ಗೌರವಾಧ್ಯಕ್ಷ ಎಚ್.ಆರ್.ರೇಣುಕಾಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಪ್ಪ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎಸ್.ಸೀತಾರಾಮ್, ಕಾರ್ಯದರ್ಶಿ ಕೆ.ಗಂಗಾಧರಯ್ಯ, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಗಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.