ಸೋಮವಾರ, ಸೆಪ್ಟೆಂಬರ್ 16, 2019
21 °C

ನೇತ್ರದಾನ:ಪ್ರಧಾನಿ ಸಿಂಗ್, ಪತ್ನಿ ಸಹಿ

Published:
Updated:

ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.`ರಾಷ್ಟ್ರೀಯ ನೇತ್ರದಾನ ದಿನ~ವಾದ  ಗುರುವಾರ ಸಿಂಗ್ ದಂಪತಿ ನೇತ್ರದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.ದೇಶದಲ್ಲಿ  45 ಲಕ್ಷ ಅಂಧರು ಇದ್ದು, ಅಕ್ಷಿ ಪಟಲದ ಜೋಡಣೆಯಿಂದ ಸುಮಾರು 30 ಲಕ್ಷ ಅಂಧರಿಗೆ ದೃಷ್ಟಿ ಕೊಡಬಹುದು ಎಂದು ವೈದ್ಯರು   ಅಭಿಪ್ರಾಯಪಟ್ಟಿದ್ದಾರೆ.ನಮ್ಮ ದೇಶದಲ್ಲಿ ಕಣ್ಣುಗಳ ಬ್ಯಾಂಕ್ ಒಕ್ಕೂಟಗಳೊಂದಿಗೆ 400ಕ್ಕೂ ಅಧಿಕ ಅಧಿಕ ಸಂಸ್ಥೆಗಳು ಗುರುತಿಸಿಕೊಂಡಿವೆ. ಇವುಗಳು ನೇತ್ರದಾನದ ಬಗ್ಗೆ ದೇಶದಾದ್ಯಂತ ಜಾಗೃತಿ ಮೂಡಿಸುತ್ತಿವೆ.ಸಮೀಪದ ಕಣ್ಣಿನ ಬ್ಯಾಂಕ್‌ಗಳನ್ನು  ಸಂಪರ್ಕಿಸಲು ಜನರಿಗೆ ಅನುಕೂಲ ಕಲ್ಪಿಸಲು ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಸಂಸ್ಥೆಗಳು ದೇಶದಾದ್ಯಂತ ಶುಲ್ಕ ರಹಿತ ದೂರವಾಣಿ ಸಂಖ್ಯೆ 1919  ಸೇವೆ ಒದಗಿಸುತ್ತಿವೆ.

Post Comments (+)