ನೇತ್ರಾವತಿ ಬಡಾವಣೆಗೆ ನೀರು

7

ನೇತ್ರಾವತಿ ಬಡಾವಣೆಗೆ ನೀರು

Published:
Updated:

ಕೃಷ್ಣರಾಜಪುರ: ಅತಿಯಾದ ಮಳೆ ಯಿಂದಾಗಿ ಗಂಗಯ್ಯ ಶೆಟ್ಟಿ ಕೆರೆಯ ಒಂದು ಕಾಲುವೆ ಒಡೆದು ಹೋದ ಪರ–ಣಾಮ ನೇತ್ರಾವತಿ ಬಡಾವಣೆಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಅನುಭವಿಸಿದರುಈ ಬಡಾವಣೆಯ ವ್ಯಾಪ್ತಿಯಲ್ಲಿ ಸುಮಾರು 500ಕ್ಕೂ  ಹೆಚ್ಚು ಮನೆಗಳಿವೆ.  ಬಡಾವಣೆಗೆ ಸಂಪರ್ಕ ಕಲ್ಪಿಸುವ ಒಂದು ಕಾಲುವೆ ಶನಿವಾರ ಬೆಳಗಿನ ಜಾವ ಕುಸಿದಿದ್ದರಿಂದ ಬಡಾವಣೆ ತುಂಬಾ ನೀರು ನಿವಾಸಿಗಳು ಪರದಾಡುವಂತಾಯಿತು.ಮೇಜುಗಳ ಈಜು: ಮನೆಯಲ್ಲಿ ನೀರು ತುಂಬಿದ್ದರಿಂದ ಇದ್ದ ಘನ ವಸ್ತುಗಳೆಲ್ಲಾ ನೀರಿನಲ್ಲಿ ತೇಲುವಂತಾಯಿತು. ಮೇಜು, ಕುರ್ಚಿ, ಟೇಬಲ್ಲುಗಳು, ನೀರಿನಲ್ಲಿ ತೇಲಿದವು. ಅಲ್ಲದೇ ಮಕ್ಕಳ ಪಠ್ಯ ಪುಸ್ತಕಗಳು ತೀವ್ರ ಹಾನಿಗೀಡಾಯಿತು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸ್ಥಳೀಯರು ಪಾಲಿಕೆಯು ಸಮರ್ಪಕವಾಗಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸುಮಾರು 25.43 ಎಕರೆ ವಿಸ್ತ್ರೀರ್ಣ ವಿದ್ದ  ಕೆರೆ ಒತ್ತುವರಿ ಹಾವಳಿ ಯಿಂದಾಗಿ ಕೇವಲ 18ಎಕರೆ ಮಾತ್ರ ಉಳಿದು ಕೊಂಡಿದೆ.  ಸರ್ಕಾರ ಕೆರೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಭರವಸೆ ನೀಡುತ್ತಲೇ ಇದೆ. ಆದರೆ ಇಂತಹ ಅನಾ ಹುತಗಳು ಜರುಗುತ್ತಲೇ ಇದೆ ಎಂದು ಸ್ಥಳೀಯ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಈ   ಭಾಗದಲ್ಲಿ ಉದ್ಯಾನ ಹಾಗೂ ನಡಿಗೆ ಪಥವನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಸತತವಾಗಿ  ಳೆಯಾಗಿದ್ದರಿಂದ ಕೆರೆಯ ಒಂದು ಭಾಗದಲ್ಲಿರುವ ಕಾಲುವೆ ಒಡೆದು ತೊಂದರೆಯಾಗಿದೆ. ಕಾಲುವೆಯನ್ನು ಆದಷ್ಟು ಭದ್ರಪಡಿಸಬೇಕು ಎಂದು ಅವರು ಒತ್ತಾಯಿಸಿದರು ಶಾಸಕ ಭೈರತಿ ಎ.ಬಸವರಾಜು ಅವರು ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಯಂತ್ರಗಳ ಮೂಲಕ ನೀರನ್ನು ಹೊರಕ್ಕೆ ಚೆಲ್ಲುವ ಕಾರ್ಯ ನಡೆಸಲಾಯಿತು.

‘ಕಾಲುವೆಯನ್ನು ಶೀಘ್ರದಲ್ಲೇ ದುರಸ್ತಿಗೊಳಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry