ಸೋಮವಾರ, ಅಕ್ಟೋಬರ್ 21, 2019
25 °C

ನೇತ್ರ ಚಿಕಿತ್ಸೆಗೆ ನೂತನ ಪ್ರಯೋಗಾಲಯ ನೊವೆಲ್

Published:
Updated:

ಬೆಂಗಳೂರು: ವಿವರಿಸಲಾಗದ ಅಥವಾ ಸರಿಯಾಗಿ ಗುರುತಿಸಲಾಗದ ನೇತ್ರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ವಿಶೇಷ ಚಿಕಿತ್ಸಾ ವಿಧಾನಗಳಿಂದ ಅವನ್ನು ನಿವಾರಿಸುವ ಸಲುವಾಗಿ ನಗರದ ನಾರಾಯಣ ನೇತ್ರಾಲಯವು  ವಿನೂತನ ಪ್ರಯೋಗಾಲಯವನ್ನು ಸ್ಥಾಪಿಸಿದೆ.`ನೊವೆಲ್~ (ನಾರಾಯಣ ಆಪ್ಟಿಕ್ ಇವಾಲ್ಯುವೇಷನ್ ಲ್ಯಾಬೊರೇಟರಿ) ಹೆಸರಿನ ಈ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಸೌಲಭ್ಯಗಳಿವೆ ಎಂದು ನೇತ್ರಾಲಯದ ಉಪಾಧ್ಯಕ್ಷ ಡಾ.ರೋಹಿತ್ ಶೆಟ್ಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಈ ಪ್ರಯೋಗಾಲಯವನ್ನು 18 ತಿಂಗಳಿಂದ ಅಭಿವೃದ್ಧಿ ಪಡಿಸುತ್ತಿದ್ದೇವೆ. ನೇತ್ರಾಲಯಕ್ಕೆ ಬರುವ ರೋಗಿಗಳ ಪೈಕಿ ಶೇಕಡಾ 10ರಷ್ಟು ಮಂದಿಗೆ ಈಗಾಗಲೇ ಹೆಸರಿಸಲಾಗಿರುವ ಯಾವುದೇ ನೇತ್ರ ಸಮಸ್ಯೆ ಇರುವುದಿಲ್ಲ. ಆದರೆ ಅವರಿಗೆ ಹೇಳಿಕೊಳ್ಳಲಾಗದ ಕಣ್ಣಿನ ಸಮಸ್ಯೆ ಇರುತ್ತದೆ. ಅಂತಹುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ನಮ್ಮ ಗುರಿ~ ಎಂದು ಅವರು ಹೇಳಿದರು.`ವಿವರಿಸಲಾಗದ ನೇತ್ರ ಸಮಸ್ಯೆಗಳಿಂದ ಬಳಲುವವರ ಪೈಕಿ ಹೆಚ್ಚಿನವರಿಗೆ ಒಣಗಣ್ಣು ಅಥವಾ ಟಿಯರ್ ಫಿಲ್ಮ್ ಸಮಸ್ಯೆ ಇದೆ. ಹವಾನಿಯಂತ್ರಿತ ವಾತಾವರಣದಲ್ಲಿ ದೀರ್ಘ ಕಾಲ ಕಂಪ್ಯೂಟರ್ ಪರದೆಯನ್ನು ನೋಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ವಿಟಮಿನ್ ಬಿ12 ಕೊರತೆ ಮತ್ತು ವಂಶವಾಹಿ ದೋಷದಿಂದಲೂ ಕಣ್ಣಿನ ತೊಂದರೆ ಬರಬಹುದು~ ಎಂದು ಅವರು ವಿವರಿಸಿದರು.`ಅಲ್ಲವರ್ ಗುಲ್‌ಸ್ಟ್ರಾಂಡ್ ಅವರು ನೊಬೆಲ್ ಪುರಸ್ಕಾರ ಪಡೆದ ಮೊದಲ ನೇತ್ರತಜ್ಞ. 1911ರಲ್ಲಿ ಅವರಿಗೆ ಈ ಅತ್ಯುನ್ನತ ಪುರಸ್ಕಾರ ದೊರೆಯಿತು. ಅದರ ನೂರನೇ ವರ್ಷದ ನೆನಪಿಗೆ ಆರಂಭಿಸಿರುವ ಈ ಪ್ರಯೋಗಾಲಯವು ಸ್ವತಂತ್ರ ಸಂಶೋಧಕರಿಗೆ ಮುಕ್ತವಾಗಿದೆ. ಪ್ರಯೋಗಾಲಯದ ಸ್ಥಾಪನೆಗೆ 3ರಿಂದ 4 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ~ ಎಂದು ಅವರು ಹೇಳಿದರು.`ನೇತ್ರಾಲಯದಲ್ಲಿ ರೋಗ ಪತ್ತೆಯಿಂದ ಚಿಕಿತ್ಸೆವರೆಗೆ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಸಿಗುತ್ತಿವೆ. ದುರ್ಬಲ ವರ್ಗದ ರೋಗಿಗಳಿಗೆ ಆಸ್ಪತ್ರೆಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ~ ಎಂದು ಅವರು ತಿಳಿಸಿದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)