`ನೇತ್ರ ಸಹಾಯಕ ಈಗ ನೇತ್ರಾಧಿಕಾರಿ'

7

`ನೇತ್ರ ಸಹಾಯಕ ಈಗ ನೇತ್ರಾಧಿಕಾರಿ'

Published:
Updated:

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ನೇತ್ರ ಸಹಾಯಕರು, ಹಿರಿಯ ನೇತ್ರ ಸಹಾಯಕರು ಮತ್ತು ಮುಖ್ಯ ನೇತ್ರ ಸಹಾಯಕರ ಹುದ್ದೆಗಳನ್ನು ನೇತ್ರಾಧಿಕಾರಿ, ಹಿರಿಯ ನೇತ್ರಾಧಿಕಾರಿ ಮತ್ತು ಮುಖ್ಯ ನೇತ್ರಾಧಿಕಾರಿ ಎಂದು ಮಾರ್ಪಾಡು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯ ಸರ್ಕಾರಿ ನೇತ್ರ ಸಹಾಯಕರ ಸಂಘದ ಮನವಿಯಂತೆ ಹುದ್ದೆಗಳನ್ನು ಮಾರ್ಪಾಡು ಮಾಡಲಾಗಿದೆ. ಆದರೆ, ವೇತನ ಶ್ರೇಣಿ, ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಹುದ್ದೆಗಳ ಹೆಸರು ಮಾರ್ಪಡಿಸಿದ್ದಕ್ಕೆ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ಅವರು ಸರ್ಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry