ಮಂಗಳವಾರ, ಜೂನ್ 22, 2021
22 °C

ನೇಪಾಳಕ್ಕೆ ಅಚ್ಚರಿಯ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್‌ (ಪಿಟಿಐ): ನೇಪಾಳ ತಂಡದವರು ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ 9 ರನ್‌ಗಳ ಅಚ್ಚರಿಯ ಗೆಲುವು ಪಡೆದರು. ಆದರೂ ಈ ತಂಡದವರು ಪ್ರಧಾನ ಹಂತ ಪ್ರವೇಶಿಸಲು ವಿಫಲರಾದರು. ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೇಪಾಳ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 141 ರನ್‌ ಪೇರಿಸಿತು. ಆಫ್ಘನ್‌ ತಂಡ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್‌ ಗಳಿಸಲಷ್ಟೇ ಶಕ್ತವಾಯಿತು.ಸಂಕ್ಷಿಪ್ತ ಸ್ಕೋರ್‌: ನೇಪಾಳ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 141 (ಸುಭಾಷ್‌ ಕಕುರೆಲ್‌ 56, ಗ್ಯಾನೇಂದ್ರ ಮಲ್ಲಾ 22, ಶರದ್‌ ವೆಸಾವ್ಕರ್‌ 37, ಶಾಪೂರ್‌ ಜದ್ರಾನ್‌ 19ಕ್ಕೆ 2) ಆಫ್ಘಾನಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 (ಶಫೀಕುಲ್ಲಾ 36, ಅಸ್ಗರ್‌ ಸ್ಟಾನಿಕ್‌ಜಾಯ್ 49, ಜಿತೇಂದ್ರ ಮುಖಿಯಾ 18ಕ್ಕೆ 3, ಸೊಂಪಲ್‌ ಕಮಿ 32ಕ್ಕೆ 2, ಶಕ್ತಿ ಗೌಚಾನ್‌ 25ಕ್ಕೆ 2). ಫಲಿತಾಂಶ: ನೇಪಾಳಕ್ಕೆ 9 ರನ್‌ ಗೆಲುವು ಹಾಗೂ 2 ಪಾಯಿಂಟ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.