ನೇಪಾಳಕ್ಕೆ ಸೇನಾ ನೆರವು: ಪುನರಾರಂಭ ಪ್ರಕ್ರಿಯೆ ಪ್ರಗತಿಯಲ್ಲಿ

ಭಾನುವಾರ, ಜೂಲೈ 21, 2019
26 °C

ನೇಪಾಳಕ್ಕೆ ಸೇನಾ ನೆರವು: ಪುನರಾರಂಭ ಪ್ರಕ್ರಿಯೆ ಪ್ರಗತಿಯಲ್ಲಿ

Published:
Updated:

ಕಠ್ಮಂಡು (ಪಿಟಿಐ): ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ವಿಷಯ ಪ್ರಗತಿಯಲ್ಲಿದೆ ಎಂದು ಭಾರತ ಬುಧವಾರ ಹೇಳಿದೆ. ದೊರೆ ಜ್ಞಾನೇಂದ್ರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರಿಂದ 2005ರಲ್ಲಿ ಭಾರತ ಆ ರಾಷ್ಟ್ರಕ್ಕೆ ಸೇನಾ ನೆರವು ನೀಡುವುದನ್ನು ಸ್ಥಗಿತಗೊಳಿಸಿತ್ತು.`ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಉತ್ಸುಕವಾಗಿವೆ. ಈ ಪ್ರಕ್ರಿಯೆ ಪ್ರಗತಿಯಲ್ಲೂ ಇದೆ~ ಎಂದು ಇಲ್ಲಿಗೆ ಐದು ದಿನಗಳ ಭೇಟಿಗಾಗಿ ಆಗಮಿಸಿರುವ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ತಿಳಿಸಿದರು.ನೇಪಾಳ ಪ್ರಧಾನಿ ಕರೆಯ ಮೇರೆಗೆ ಇಲ್ಲಿಗೆ ಭೇಟಿ ನೀಡಿರುವ ಸಿಂಗ್,ಅಲ್ಲಿನ  ಅಧ್ಯಕ್ಷರನ್ನೂ ಭೇಟಿ ಮಾಡಲಿದ್ದಾರೆ.

ನೇಪಾಳ ಸೇನಾ ಮುಖ್ಯಸ್ಥ ಛತ್ರಾಮನ್ ಸಿಂಗ್ ಗುರುಂಗ್ ಅವರನ್ನು ವಿಕ್ರಂ ಸಿಂಗ್ ಮಂಗಳವಾರ ಭೇಟಿ ಮಾಡಿದ್ದು, ಪರಸ್ಪರ ಸೇನಾ ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry