ನೇಪಾಳದಿಂದ ನಿರುಪಮಾ ವಾಪಸ್

7

ನೇಪಾಳದಿಂದ ನಿರುಪಮಾ ವಾಪಸ್

Published:
Updated:

ಕಠ್ಮಂಡು (ಐಎಎನ್‌ಎಸ್): ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ನೇಪಾಳಕ್ಕೆ ನೀಡಿದ್ದ ತಮ್ಮ ಮೂರು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸಿ ಭಾರತಕ್ಕೆ ಹಿಂತಿರುಗಿದರು.ನಿರುಪಮಾ ಅವರು ತಮ್ಮ ಭೇಟಿಯ ವೇಳೆ ನೇಪಾಳ ಸರ್ಕಾರ ಮತ್ತು ರಾಜಕೀಯ ನಾಯಕರುಗಳೊಂದಿಗೆ ಮಾತುಕತೆಯನ್ನು ನಡೆಸಿದರಲ್ಲದೆ ಹಿಂತಿರುಗುವ ಮುನ್ನ ಸಂಪ್ರದಾಯದಂತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಅವರ ಗುರುವಾರದ ಭೇಟಿ ಇಂಧನ ಸಚಿವ ಪ್ರಕಾಶ್ ಶರಣ್ ಮಹತ್ ಮತ್ತು ಇಬ್ಬರು ಉಪ ಪ್ರಧಾನಿಗಳ ಜತೆಗಿನ ಮಾತುಕತೆಗೆ ಮಾತ್ರ ಸೀಮಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry