ನೇಪಾಳಿ ವೃದ್ಧ: ಜಗತ್ತಿನಲ್ಲೇ ಅತಿ ಕುಳ್ಳ

7

ನೇಪಾಳಿ ವೃದ್ಧ: ಜಗತ್ತಿನಲ್ಲೇ ಅತಿ ಕುಳ್ಳ

Published:
Updated:

ಕಠ್ಮಂಡು (ಪಿಟಿಐ): ಚಂದ್ರ ಬಹದೂರ್ ದಂಗಿ ಎಂಬ 72 ವರ್ಷ ವಯಸ್ಸಿನ ನೇಪಾಳಿ ವೃದ್ಧನೊಬ್ಬ ತಾನು ಜಗತ್ತಿನಲ್ಲೇ ಅತ್ಯಂತ ಗಿಡ್ಡ ವ್ಯಕ್ತಿ ಎಂದು ಹೇಳಿಕೊಂಡಿದ್ದು, ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾನೆ.ಪಶ್ಚಿಮ ನೇಪಾಳದ ದಾಂಗ್ ಜಿಲ್ಲೆಯವನಾದ ಚಂದ್ರ ಬಹದೂರ್ ಕೇವಲ 22 ಇಂಚು ಎತ್ತರವಿದ್ದು, 12 ಕೆ.ಜಿ. ತೂಗುತ್ತಾನೆ. ತನ್ನ ತಂದೆಯ ಆರು ಮಕ್ಕಳಲ್ಲಿ ನಾಲ್ಕನೆಯವನಾದ ಈತ ಒಮ್ಮೆಯೂ ಆಸ್ಪತ್ರೆಗೆ ಹೋಗಿಲ್ಲ ಎಂದು ಕುಟುಂಬದವರು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry