ನೇಪಾಳ ತಂಡದಲ್ಲಿ ಆಟಗಾರ್ತಿಯರು!

7

ನೇಪಾಳ ತಂಡದಲ್ಲಿ ಆಟಗಾರ್ತಿಯರು!

Published:
Updated:

ಬೆಂಗಳೂರು: ಅಂಧರ ಚೊಚ್ಚಲ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಒಂಬತ್ತು ರಾಷ್ಟ್ರಗಳ ಆಟಗಾರರಲ್ಲಿ ಉದ್ಘಾಟನಾ ಸಮಾರಂಭದಲ್ಲಿ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿದ್ದು ನೇಪಾಳ ತಂಡದವರು.

ಈ ತಂಡದಲ್ಲಿ ಇಬ್ಬರು ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ರೂಪಾ ಬಲಾಲ್ ಮತ್ತು ಭಾಗವತಿ ಭಟ್ಟಾರಾಯ್ ಅವರು ನೇಪಾಳ ತಂಡದಲ್ಲಿರುವ ಆಟಗಾರ್ತಿಯರು.

ಪಥ ಸಂಚಲನದ ವೇಳೆ ಕಾಣಿಸಿಕೊಂಡ ನೇಪಾಳದ ಆಟಗಾರ್ತಿಯರು ನೆರೆದವರಲ್ಲಿ ಅಚ್ಚರಿ ಮೂಡಿಸಿದರು. ಆಗ, ಸಂಘಟಕರು ನೇಪಾಳ ತಂಡದಲ್ಲಿ ಇಬ್ಬರು ಮಹಿಳೆಯರೂ ಇರುವುದನ್ನು ಮೇಲಿಂದ ಮೇಲೆ ಹೇಳಿದಾಗ ಚಪ್ಪಾಳೆಯ ಸದ್ದು ಹೆಚ್ಚಾಯಿತು.

`ಅಂಧರ ಕ್ರಿಕೆಟ್‌ನಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಒಟ್ಟಿನಲ್ಲಿ ಅಂಧರಾಗಿದ್ದರೆ ಸಾಕು, ಅವರಿಗೂ ಅವಕಾಶ      ನೀಡಲಾಗುತ್ತದೆ' ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಎಸ್. ನಾಗೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry